
ಹಸಿರು ಬಟಾಣಿ, ಹೆಸರು ಕೇಳ್ತಿದ್ದಂತೆ ಮಸಾಲಾ ಪುರಿ ನೆನಪಾಗುತ್ತದೆ. ಅನೇಕರು ಹಸಿರು ಬಟಾಣಿ ಇಷ್ಟಪಡ್ತಾರೆ. ತರಕಾರಿ ಲೀಸ್ಟ್ ನಲ್ಲಿ ಹಸಿರು ಬಟಾಣಿ ಇರುತ್ತೆ. ಅನೇಕರು ಸಮಯದ ಹೆಸರು ಹೇಳಿಕೊಂಡು, ಮಾರುಕಟ್ಟೆಯಲ್ಲಿ ಬಿಡಿಸಿಟ್ಟ ಹಸಿರು ಬಟಾಣಿ ತರ್ತಾರೆ.
ಸಾಮಾನ್ಯವಾಗಿ, ಹಸಿರು ಬಟಾಣಿಯನ್ನು, ಮುಚ್ಚಿದ ಪ್ಯಾಕೆಟ್ ನಲ್ಲಿಟ್ಟು, ಅದನ್ನು ಫ್ರಿಜ್ ನಲ್ಲಿಟ್ಟರೆ ಅದನ್ನು ಅನೇಕ ದಿನ ಬಳಸಬಹುದು. ಈ ರೀತಿಯಾಗಿ ಬಟಾಣಿ ಸಂಗ್ರಹಿಸಿಟ್ಟರೆ, ಬಟಾಣಿ ಋತು ಮುಗಿದ ನಂತ್ರವೂ ನಾವಿದನ್ನು ಬಳಸಬಹುದು. ಆದ್ರೆ ಈ ಬಟಾಣಿಗೆ ಬಣ್ಣ ಹಾಕಲಾಗುತ್ತದೆ. ಹಸಿರು ಬಟಾಣಿ ತಾಜಾ ಕಾಣಲಿ ಎಂಬ ಕಾರಣಕ್ಕೆ ಅದಕ್ಕೆ ಬಣ್ಣ ಹಚ್ಚಲಾಗುತ್ತದೆ.
ಮಾರುಕಟ್ಟೆಯಿಂದ ತಂದ ಹಸಿರು ಬಟಾಣಿಗೆ ಬಣ್ಣ ಹಾಕಲಾಗಿದೆಯಾ? ಇಲ್ಲವಾ ಎಂಬುದನ್ನು ನೀವು ಸುಲಭವಾಗಿ ಪತ್ತೆ ಮಾಡಬಹುದು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಹಸಿರು ಬಟಾಣಿ ಪರೀಕ್ಷಿಸಲು ವಿಧಾನವನ್ನು ಹೇಳಿದೆ.
ಹಸಿರು ಬಟಾಣಿಯನ್ನು ಗ್ಲಾಸ್ ನಲ್ಲಿ ಹಾಕಿ, ಅದಕ್ಕೆ ನೀರು ಹಾಕಿ 30 ನಿಮಿಷ ನೆನೆಸಿಡಿ. ನೀರು ಹಸಿರು ಬಣ್ಣಕ್ಕೆ ತಿರುಗಿದ್ರೆ, ಬಟಾಣಿಗೆ ಬಣ್ಣ ಹಾಕಲಾಗಿದೆ ಎಂದರ್ಥ. ನೀರಿನ ಬಣ್ಣ ಬದಲಾಗದೆ ಹೋದ್ರೆ, ಬಣ್ಣ ಹಾಕಿಲ್ಲವೆಂದು ಅರ್ಥ ಮಾಡಿಕೊಳ್ಳಿ.