ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ನೋಟಿಸ್ ಕಳುಹಿಸಿದ್ದು, ತಂತಮ್ಮ ಖಾತೆಗಳಿಗೆ ಜೂನ್ 30ರೊಳಗಾಗಿ ಪಾನ್-ಆಧಾರ್ ಲಿಂಕಿಂಗ್ ಮಾಡಲು ಸೂಚಿಸಿದೆ. ಖಾತೆದಾರರು ಈ ಲಿಂಕಿಂಗ್ ಮಾಡದೇ ಇದ್ದಲ್ಲಿ ಬ್ಯಾಂಕಿಂಗ್ ಸೇವೆಗಳು ಅಂಥವರಿಗೆ ಅಲಭ್ಯವಾಗಲಿದೆ ಎಂದು ಎಸ್‌ಬಿಐ ತಿಳಿಸಿದೆ.
ಈ ಘೋಷಣೆಯನ್ನು ಎಸ್‌ಬಿಐ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕವೂ ಘೋಷಣೆ ಮಾಡಿದೆ. ಇದೇ ವೇಳೆ ಪಾನ್-ಆಧಾರ್ ಲಿಂಕಿಂಗ್ ಕಡ್ಡಾಯವಾಗಿರುವುದು ಏಕೆಂದು ಎಸ್‌ಬಿಐ ವಿವರಿಸಿದೆ.
www.incometaxindiaefilling.gov.in ಜಾಲತಾಣಕ್ಕೆ ಭೇಟಿಕೊಟ್ಟು, ಅಲ್ಲಿ ’ಲಿಂಕ್ ಆಧಾರ್’ ಮೇಲೆ ಕ್ಲಿಕ್ ಮಾಡಿ ನಂತರ ಮುಂದಿನ ವಿವರಗಳ ಸಲ್ಲಿಕೆಗೆ ಮುಂದುವರೆಯಬಹುದು.
ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುವ 10 ಅಂಕಿಯ ಪಾನ್ (ಶಾಶ್ವತ ಖಾತೆ ಸಂಖ್ಯೆ) ಸಂಖ್ಯೆಯು ಬಹಳ ಮುಖ್ಯವಾದ ವಿತ್ತೀಯ ದಾಖಲೆಯಾಗಿದ್ದು, ಆರ್ಥಿಕ ವ್ಯವಹಾರಗಳನ್ನು ನಡೆಸುವ ವೇಳೆ ತೆರಿಗೆ ವಂಚನೆಯನ್ನು ತಪ್ಪಿಸಲು ಸಹಕಾರಿಯಾಗಿದೆ. ಈ ಪಾನ್ ಕಾರ್ಡ್ ಮೂಲಕ ಆದಾಯ ತೆರಿಗೆ ಇಲಾಖೆಯು ನಿಮ್ಮಿಂದ ನಡೆದಿರುವ ದೊಡ್ಡ ಮಟ್ಟದ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ಇಲಾಖೆ ಪಡೆದುಕೊಳ್ಳಬಹುದಾಗಿದೆ.