ನವದೆಹಲಿ : ಗ್ರಾಹಕರಿಗೆ ವಿಶ್ವದ ಅತಿದೊಡ್ಡ ಬ್ಯಾಂಕ್ ಎಸ್ ಬಿ ಐ ಮಹತ್ವದ ಸೂಚನೆ ನೀಡಿದ್ದು, ಸೆಪ್ಟೆಂಬರ್ 15 ರೊಳಗೆ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ.
ಈಗಾಗಲೇ ಸರ್ಕಾರ ಎಲ್ಲಾ ಯೋಜನೆಯ ಹಣವನ್ನು ಆಧಾರ್ ಲಿಂಕ್ ಆದ ಖಾತೆಗೆ ಜಮಾ ಮಾಡಲಾಗುತ್ತಿರುವ ಹಿನ್ನೆಲೆ ಬ್ಯಾಂಕ್ ಜೊತೆ ಆಧಾರ್ ಲಿಂಕ್ ಕಡ್ಡಾಯವಾಗಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆ ಮುಂತಾದ ಯೋಜನೆಗಳನ್ನು ಒಳಗೊಂಡಿದೆ. ಆಧಾರ್ ಲಿಂಕ್ ಮಾಡಿದಾಗ ನೀವು ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ ಎಸ್ ಬಿ ಐ ಹೇಳಿದೆ.
ಅದೇ ರೀತಿ ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಎಲ್ಲಾ ಲಾಕರ್ ಹೊಂದಿರುವವರಿಗೆ ತಮ್ಮ ಶಾಖೆಗೆ ಭೇಟಿ ನೀಡಿ ಹೊಸ ಲಾಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ ಸೂಚನೆ ನೀಡಿತ್ತು. ಸೆ.30 ರೊಳಗೆ ಬ್ಯಾಂಕಿನ ಶಾಖೆಗೆ ಬಂದು ಹೊಸ ಲಾಕರ್ ಒಪ್ಪಂದಕ್ಕೆ ಆದಷ್ಟು ಬೇಗ ಸಹಿ ಹಾಕುವಂತೆ ಕೇಳಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಲಾಕರ್ ನಿಯಮಗಳನ್ನು ಹೊರಡಿಸಿದೆ. ಬ್ಯಾಂಕಿನ ಶಾಖೆಗೆ ಬಂದು ಹೊಸ ಲಾಕರ್ ಒಪ್ಪಂದಕ್ಕೆ ಆದಷ್ಟು ಬೇಗ ಸಹಿ ಹಾಕುವಂತೆ ಕೇಳಿದೆ.