ಮಡಿಕೇರಿ : ಭಾರತ ಆಹಾರ ನಿಗಮದಲ್ಲಿ ಲಭ್ಯತೆಯನುಸಾರ ಆಗಸ್ಟ್-2023 ರ ಮಾಹೆಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ‘ಸಾರವರ್ಧಿತ’ (ಪೌಷ್ಟಿಕಾಂಶ) ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪಡಿತರದಾರರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ಸಾರವರ್ಧಿತ ಅಕ್ಕಿಯನ್ನು ಪಡೆದು ಸದುಪಯೋಗಿಸಿಕೊಳ್ಳಬೇಕೆಂದು ಸಾರ್ವಜನಿಕ ಪಡಿತರದಾರರಲ್ಲಿ ಆಹಾರ ಇಲಾಖೆ ಕೋರಿದೆ.
ಅಂತ್ಯೋದಯ ಪಡಿತರ ಚೀಟಿಗಳಿಗೆ (ಎಎವೈ) ಪ್ರತಿ ಪಡಿತರ ಚೀಟಿಗೆ ಅಕ್ಕಿ- 35 ಕೆ.ಜಿ ಉಚಿತ, ಪಿಹೆಚ್ಹೆಚ್ ಪಡಿತರ ಚೀಟಿಗಳಿಗೆ (ಬಿಪಿಎಲ್) (ಆದ್ಯತಾ) ಪ್ರತಿ ಸದಸ್ಯರಿಗೆ ಅಕ್ಕಿ-05 ಕೆ.ಜಿ. ಉಚಿತ, ಅಂತರ್ ನ್ಯಾಯಬೆಲೆ ಅಂಗಡಿ / ಅಂತರ್ ಜಿಲ್ಲೆ /ಅಂತರ್ ರಾಜ್ಯ ಪಡಿತರ ಚೀಟಿಗಳಿಗೆ ಪೋರ್ಟಬಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಜಿಲ್ಲೆಯ/ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.