ಬೆಂಗಳೂರು : ‘ಅನ್ನಭಾಗ್ಯ’ ಯೋಜನೆಯಡಿ ಸರ್ಕಾರ 5 ಕೆಜಿ ಅಕ್ಕಿ ನೀಡುತ್ತಿದೆ. ಹಾಗೂ ಇನ್ನುಳಿದ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡುತ್ತಿದೆ. ಇದೀಗ ಪಡಿತರದಾರರಿಗೆ ಮುಖ್ಯ ಮಾಹಿತಿ ಅಂದರೆ ಉಚಿತವಾಗಿ ಸರ್ಕಾರ ಅಕ್ಕಿ ನೀಡುತ್ತಿದ್ದು, ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಂದ ಜಾತಿ ಪ್ರಮಾಣ ಪತ್ರ ಸಂಗ್ರಹಿಸುತ್ತಿದೆ.
ಆದ್ದರಿಂದ ನೀವು ಅಕ್ಕಿ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋದರೆ ರೇಷನ್ ಕಾರ್ಡ್ ಜೊತೆ ಜಾತಿ ಪ್ರಮಾಣ ಪತ್ರ ವನ್ನು ಕೂಡ ಕೊಂಡೊಯ್ಯಬೇಕು.
ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಾರ್ಯದರ್ಶಿಗಳ ಸೂಚನೆ ಅನ್ವಯ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯಲು ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಇಲಾಖೆ ಅಂಕಿ ಅಂಶಗಳಿಗಾಗಿ ಉಳಿದ ಪರಿಶಿಷ್ಟ ಫಲಾನುಭವಿಗಳ ವಿವರ ಸಂಗ್ರಹಿಸಲಾಗುತ್ತಿದೆ.
ಜುಲೈ ಹಾಗೂ ಆಗಸ್ಟ್ ಕಂತಿನ ಹಣವನ್ನು ರಾಜ್ಯದ ಜನರು ಪಡೆದಿದ್ದಾರೆ. ಮುಂದಿನ ತಿಂಗಳಿನಿಂದಾದರು 10 ಕೆಜಿ ಅಕ್ಕಿ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ.