ಬೆಂಗಳೂರು : ಅ.5 ಮತ್ತು 6 ರಂದು ಬೆಸ್ಕಾಂ ಆನ್ ಲೈನ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.ಬೆಸ್ಕಾಂನ ಐಟಿ ವಿಭಾಗದಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ನಿಮಿತ್ತ ಅಕ್ಟೋಬರ್ 4ರ ರಾತ್ರಿ 9 ರಿಂದ ಅಕ್ಟೋಬರ್ 7ರ ಬೆಳಿಗ್ಗೆ 06 ಗಂಟೆವರೆಗೆ ಆರ್.ಎ.ಪಿ.ಡಿ.ಆರ್.ಪಿ ನಗರ ಪ್ರದೇಶದ ಗ್ರಾಹಕರಿಗೆ ಆನ್ಲೈನ್ ಸೇವೆಗಳು ಲಭ್ಯವಿರುವುದಿಲ್ಲ.
ಬೆಸ್ಕಾಂನ ಉಪವಿಭಾಗದ ವ್ಯಾಪ್ತಿಯಲ್ಲಿ ಎರಡು ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿದಂತೆ ಯಾವುದೇ ಆನ್ಲೈನ್ ಸೇವೆ ಲಭ್ಯವಿರುವುದಿಲ್ಲ. ಹಾಗೆಯೇ ಬೆಸ್ಕಾಂ ಕ್ಯಾಶ್ ಕೌಂಟರ್ ಗಳಲ್ಲಿ ಬಿಲ್ ಪಾವತಿಸಲು ಸಾಧ್ಯವಿರುವುದಿಲ್ಲಅಕ್ಟೋಬರ್ 5ರ ಬೆಳಗ್ಗೆ 11ರ ನಂತರ ವಿದ್ಯುತ್ ಬಿಲ್ ಪಾವತಿ ಕಾರ್ಯ ಪುನರಾರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ
ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕ್ಯಾತಸಂದ್ರ, ಸಿರಾ, ಚನ್ನಪಟ್ಟಣ, ಆನೇಕಲ್, ಮುಳಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆಜಿಎಫ್, ಚಳ್ಳಕೆರೆ, ಕುಣಿಗಲ್, ಹರಪ್ಪನಹಳ್ಳಿ, ಹಿರಿಯೂರು, ತಿಪಟೂರು, ಗೌರಿಬಿದನೂರು
ಹೆಚ್ಚಿನ ಮಾಹಿತಿಗಾಗಿಬೆಸ್ಕಾಂನ 24×7 ಸಹಾಯವಾಣಿ 1912ಕ್ಕೆ ಕರೆಮಾಡಿ ಅಥವಾ ಬೆಸ್ಕಾಂ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲಐಟಿ ವ್ಯವಸ್ಥೆ ಉನ್ನತೀಕರಣದಿಂದ ಹೊಸ ಸಂಪರ್ಕ ಪ್ರಕ್ರಿಯೆ, ಹೆಸರು ವರ್ಗಾವಣೆ, ಸುಂಕ ಬದಲಾವಣೆ ಸೇರಿ ವಿವಿಧ ಕಾರ್ಯಾಚರಣೆಗಳಿಗೆ ಆರ್ ಎಪಿಡಿ ಆರ್ ಪಿ ಅಪ್ಲಿಕೇಷನ್ ಲಭ್ಯವಿರಲ್ಲ. ಅ.4 ರ ರಾತ್ರಿ 9 ರಿಂದ ಅ.5 ರ ಬೆಳಗ್ಗೆ 11 ಗಂಟೆವರೆಗೆ ಆನ್ ಲೈನ್ ಬಿಲ್ ಪಾವತಿ ಕೂಡ ಸ್ಥಗಿತಗೊಳ್ಳಲಿದ್ದು, ಅ.5 ರ ಬೆಳಗ್ಗೆ 11 ರ ನಂತರ ಬಿಲ್ ಪಾವತಿ ವ್ಯವಸ್ಥೆ ಮತ್ತೆ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 1912 ಗೆ ಕರೆ ಮಾಡಬಹುದಾಗಿದೆ ಎಂದು ಬೆಸ್ಕಾ ಪ್ರಕಟಣೆ ಹೊರಡಿಸಿದೆ.