ಬೆಂಗಳೂರು : ಇಂದು ದಿನವಿಡೀ ರಾಜ್ಯದಲ್ಲಿ ‘ಸಿಎಂ ಜನತಾ ದರ್ಶನ’ ನಡೆಯಲಿದ್ದು, ಸರತಿ ಸಾಲಿನಲ್ಲಿ ಜನರು ಬಂದು ತಮ್ಮ ದೂರು, ಅಹವಾಲು ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜನರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹರಿಸಲಿದ್ದಾರೆ.
ನೀವು ನೇರವಾಗಿ ಸಿಎಂ ಜನತಾ ದರ್ಶನ’ ದಲ್ಲಿ ಭಾಗಿಯಾಗಿ ದೂರು ಸಲ್ಲಿಸೋಕೆ ಆಗ್ತಿಲ್ವಾ..? ಹಾಗಾದರೆ ಏನು ಮಾಡಬೇಕು..ಎಂಬುದನ್ನು ತಿಳಿದುಕೊಳ್ಳಿ.
ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಿಎಂ ಜನತಾ ದರ್ಶನಕ್ಕೆ ದೂರುಗಳನ್ನ ನೇರವಾಗಿ ಸಲ್ಲಿಸಬಹುದಾಗಿದೆ. ipgrs.Karnataka. gov.in ಈ ಜಾಲತಾಣದ ಮೂಲಕ ನೀವು ನಿಮ್ಮ ದೂರುಗಳನ್ನು ಸಿಎಂ ಜನತಾ ದರ್ಶನದಲ್ಲಿ ದಾಖಲಿಸಬಹುದಾಗಿದೆ. ಸಾರ್ವಜನಿಕರು ಸ್ವೀಕೃತಿ ಸಂಖ್ಯೆ ಬಳಸಿ ತಮ್ಮ ಕುಂದುಕೊರತೆ/ಅಹವಾಲಿನ ಸ್ಥಿತಿಗತಿಯನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ಅಥವಾ 1902 ಸಂಖ್ಯೆಗೆ ಕರೆಮಾಡಿ ತಿಳಿದುಕೊಳ್ಳಬಹುದು.
ಸ್ವೀಕರಿಸಲಾದ ಕುಂದುಕೊರತೆ, ಅಹವಾಲುಗಳನ್ನು ಸಂಬಂಧಿಸಿದ ಇಲಾಖೆಗಳ/ಅಧೀನ ಸಂಸ್ಥೆಗಳ ಅಧಿಕಾರಿಗಳ ಲಾಗಿನ್ಗಳಿಗೆ ಕಳುಹಿಸಲಾಗುತ್ತದೆ . ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸ್ವೀಕೃತವಾದ ಕುಂದುಕೊರತೆ/ಅಹವಾಲುಗಳನ್ನು ಸ್ವಯಂಚಾಲಿತವಾಗಿ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳ ಇ-ಆಫೀಸ್ ಲಾಗಿನ್ಗೆ ಕಳುಹಿಸುವ ವ್ಯವಸ್ಥೆ ಅಳವಡಿಸಲಾಗಿದೆ. ಇ-ಆಫೀಸ್ನಲ್ಲಿ ಸದರಿ ಕಡತದ ಪ್ರತಿ ಹಂತದ ಚಲನೆಯನ್ನು API ಮೂಲಕ ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಗೆ ಒದಗಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ದೂರುಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ.1902ಕ್ಕೆ ಕರೆಮಾಡಿ ಆನ್ಲೈನ್ ಮೂಲಕ ಈಗಲೇ ನೊಂದಾಯಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಬಳಸಿ.