ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ 2025-26 ನೇ ಸಾಲಿನ ಪಿಎಮ್ಶ್ರೀ ಸ್ಕೂಲ್ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ 5 ನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯೊಂದಿಗೆ ಶಾಲೆಯ ಮುಖ್ಯೋಪಾಧ್ಯಾಯರಿಂದ ಸಹಿ ಮಾಡಿದ ನವೋದಯ ಅರ್ಜಿ ಫಾರ್ಮ್, ಮಗುವಿನ ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮಗುವಿನ ಇತ್ತೀಚಿನ ಭಾವಚಿತ್ರ, ಮಗು ಮತ್ತು ಪಾಲಕರ ಸಹಿ ಈ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 16 ಕೊನೆಯ ದಿನವಾಗಿದೆ. ಪ್ರವೇಶ ಪರೀಕ್ಷೆಯು 2025 ರ ಜನವರಿ, 18 ರಂದು ನಡೆಯಲಿದೆ.
ವಿದ್ಯಾರ್ಥಿಯು ದಿನಾಂಕ 01-05-2013 ರಿಂದ 31-07-2015 ರೊಳಗೆ ಜನಿಸಿರಬೇಕು. ಅಭ್ಯರ್ಥಿಯ ಪೋಷಕರು ಕೊಡಗು ಜಿಲ್ಲೆಯವರೇ ಆಗಿರಬೇಕು. ಅರ್ಜಿದಾರರು ಕೊಡಗು ಜಿಲ್ಲೆಯ ನಿವಾಸಿಯಾಗಿರಬೇಕು ಮತ್ತು ಕೊಡಗು ಜಿಲ್ಲೆಯ ಸರ್ಕಾರಿ, ಸರ್ವ ಶಿಕ್ಷಣ ಅಭಿಯಾನ, ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಪ್ರಸ್ತುತ 5ನೇ ತರಗತಿ ಓದುತ್ತಿರಬೇಕು. ಅರ್ಜಿಯನ್ನು ವೆಬ್ಸೈಟ್ https://navodaya.gov.in ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಗಣೇಶ ಹೆಗಡೆ ಟಿ.ಜಿ.ಟಿ.ಕನ್ನಡ 9482557322, ಮಾರುತಿ ಪಿ.ಡಿ. ಟಿ.ಜಿ.ಟಿ. ಕನ್ನಡ 9611862835 ಹಾಗೂ ಅನುರಾಧ ಜೆ.ಎಸ್.ಎ. 93808052179 ನ್ನು ಸಂಪರ್ಕಿಸಬಹುದು ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪಿಎಮ್ಶ್ರೀ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.