ಬಳ್ಳಾರಿ : ತಾಲ್ಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ 2025-26 ನೇ ಸಾಲಿಗೆ 6ನೇ ತರಗತಿ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಅಡಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಪಠ್ಯಕ್ರಮವನ್ನು ಹೊಂದಿರುವ ಶಾಲೆ ಇದಾಗಿದ್ದು, ವಿವಿಧ ವರ್ಗಗಳ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರವೇಶಾತಿಯು ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸಂಘ, ನವದೆಹಲಿ, ಇವರು ರೂಪಿಸಿರುವ ನಿಯಮಗಳಿಗೆ ಬದ್ಧವಾಗಿದ್ದು, ಪ್ರವೇಶಾತಿ ಪರೀಕ್ಷೆಯ ಮೂಲಕ ಸಂಪೂರ್ಣ ಪಾರದರ್ಶಕವಾಗಿ ಪ್ರವೇಶಾತಿಯನ್ನು ಕಲ್ಪಿಸಲಾಗುತ್ತದೆ.ಅರ್ಜಿ ಸಲ್ಲಿಸಲು ಜ.31 ಕೊನೆಯ ದಿನವಾಗಿರುತ್ತದೆ. ಫೆ.17 ರಂದು ಪ್ರವೇಶ ಪತ್ರ ಬಿಡುಗಡೆ, ಫೆ.28 ರಂದು ಪ್ರವೇಶ ಪರೀಕ್ಷೆ, ಮಾ.10 ರ ನಂತರ ಫಲಿತಾಂಶ ಮತ್ತು ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
*ಅರ್ಹತೆ
5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು. ಕನಿಷ್ಠ 31-03-2025ರ ಅಂತ್ಯಕ್ಕೆ 10 ವರ್ಷ ತುಂಬಿರಬೇಕು. ಗರಿಷ್ಠ 13 ವರ್ಷ ಒಳಗಿರಬೇಕು. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ, ಪಿವಿಟಿಜಿ ವರ್ಗ, ಡಿಎನ್ಟಿ ವರ್ಗ, ಎನ್ಟಿ ವರ್ಗ, ಎಸ್ಎನ್ಟಿ ವರ್ಗ, ಎಲ್ಡಬ್ಲೂö್ಯಇ ವರ್ಗ, ಅಂಗವಿಕಲರಿಗೆ ಹಾಗೂ ನಕ್ಸಲರಿಂದ ಮರಣ ಹೊಂದಿದ, ಕೋವಿಡ್ನಿಂದ ಮರಣ ಹೊಂದಿದ, ದಂಗೆಗಳಿಂದ ಮರಣ ಹೊಂದಿದ ಪೋಷಕರ ಮಕ್ಕಳಿಗೆ, ಪತಿಯನ್ನು ಕಳೆದುಕೊಂಡ ವಿಧವೆಯರ ಮಕ್ಕಳಿಗಾಗಿ ಪ್ರವೇಶಾತಿ ಸಮಯದಲ್ಲಿ ನಿಯಮಾನುಸಾರ ಮೀಸಲಾತಿ ಕಲ್ಪಿಸಿಕೊಡಲಾಗುವುದು.
ಗಂಡು 30, ಹೆಣ್ಣು 30 ಸೇರಿ ಒಟ್ಟು 60 ಸೀಟ್ ಲಭ್ಯವಿರುತ್ತದೆ.
*ಅರ್ಜಿಗಳನ್ನು ಇಲ್ಲಿ ಪಡೆಯಬಹುದು:*
ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆ, ಬಳ್ಳಾರಿ ನಗರದ ವಾಲ್ಮೀಕಿ ಭವನದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಮತ್ತು ಸಂಡೂರು, ಸಿರುಗುಪ್ಪ, ಬಳ್ಳಾರಿ ತಾಲ್ಲೂಕುಗಳ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಸಂಡೂರು, ಸಿರುಗುಪ್ಪ, ಬಳ್ಳಾರಿ, ಕುರುಗೋಡು, ಕಂಪ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪಡೆದುಕೊಳ್ಳಬಹುದು ಎಂದು ಕೊಳಗಲ್ಲು ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.