ಸರ್ಕಾರದ ಯೋಜನೆಗಳನ್ನು ಪಡೆಯಲು ರೇಷನ್ ಕಾರ್ಡ್ ಮುಖ್ಯವಾಗಿ ಬೇಕಾಗುತ್ತದೆ. ರೇಷನ್ ಕಾರ್ಡ್ ಸಂಬಂಧ ಕೆಲವು ಕೆಲಸ ಮಾಡದಿದ್ರೆ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ.
ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಗ್ರಾಹಕರ ಪಡಿತರ ಚೀಟಿಗಳ ಜೊತೆ ಆಧಾರ್ ಕಾರ್ಡ್ ಜೋಡಣೆ ದಿನಾಂಕವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ. . ಇದುವರೆಗೆ ಜೂ.30 ಕೊನೆಯ ದಿನವಾಗಿತ್ತು, ಆದರೆ ಇನ್ನೂ ಕೆಲವರು ಪಡಿತರ ಚೀಟಿ ಜೊತೆ ಆಧಾರ್ ಕಾರ್ಡ್ ಜೋಡಣೆ ಮಾಡದ ಹಿನ್ನೆಲೆ ಈ ದಿನಾಂಕವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ ಮಾಡಿದೆ. ಕಡ್ಡಾಯವಾಗಿ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಬೇಕು.
ಪಡಿತರ ಪಡೆಯದ್ರೆ ಇದ್ರೆ ಬಿಪಿಎಲ್ ಕಾರ್ಡ್ ರದ್ದು
ಆಹಾರ ಇಲಾಖೆಯು ಆರು ತಿಂಗಳಿನಿಂದ ಪಡಿತರ ಪಡೆಯದ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗಿದೆ. 6 ತಿಂಗಳಿನಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದು, ಯಾರು ಪಡಿತರವನ್ನು ಪಡೆದುಕೊಳ್ಳುತ್ತಿಲ್ಲವೋ ಅಂಥವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುತ್ತದೆ ಎನ್ನಲಾಗಿದೆ.
ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸುವುದು ಕಡ್ಡಾಯ
ಈಗಾಗಲೇ ಜಾರಿಗೆ ತಂದಿರುವ ಸರ್ಕಾರ ಎಲ್ಲಾ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ.ಸರ್ಕಾರ ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿದೆ. ಅಸಲಿ ರೇಷನ್ ಕಾರ್ಡ್ ಯಾವುದು ನಕಲಿ ರೇಷನ್ ಕಾರ್ಡ್ ಯಾವುದು ಎಂಬುದನ್ನು ತಿಳಿಯಲು ಸರ್ಕಾರ ಇಕೆವೈಸಿ ಕಡ್ಡಾಯಗೊಳಿಸಿದೆ.