alex Certify ಪಡಿತರ ಚೀಟಿದಾರರ ಗಮನಕ್ಕೆ : `E-KYC’ ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರ ಗಮನಕ್ಕೆ : `E-KYC’ ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ

ಗೃಹಲಕ್ಷ್ಮಿ ಯೋಜನೆ, ಕಿಸಾನ್ ಯೋಜನೆ, ಅನ್ನಭಾಗ್ಯ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗೆ ಪಡಿತರ ಹಣ ಬರಬೇಕೆಂದರೆ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ E-KYC ಆಗಿರಲೇಬೇಕು, ಇ – ಕೆವೈಸಿ (E-KYC) ಮಾಡಿಸಿದರೆ ಮಾತ್ರ ಹಣ ಬರುತ್ತದೆ. ಹಾಗಾದರೆ E-KYC ಮಾಡಿಸುವುದು ಹೇಗೆ ಇಲ್ಲಿದೆ ಮಾಹಿತಿ.

ಆನ್ಲೈನ್ ಕೆವೈಸಿ ನವೀಕರಣ ಪ್ರಕ್ರಿಯೆ

ಮೊದಲಿಗೆ, ಗ್ರಾಹಕರು ತಮ್ಮ ಬ್ಯಾಂಕಿನ ಅಧಿಕೃತ ಪೋರ್ಟಲ್ ಅನ್ನು ತೆರೆಯಬೇಕು ಮತ್ತು ಲಾಗ್ ಇನ್ ಮಾಡಬೇಕು. ಅದರ ನಂತರ, ಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

– ಸೂಚನೆಗಳನ್ನು ಅನುಸರಿಸಿ ಮತ್ತು ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಇತ್ಯಾದಿಗಳನ್ನು ನಮೂದಿಸಿ.
– ಆಧಾರ್, ಪ್ಯಾನ್ ಮತ್ತು ಇತರ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಂತರ ಅಪ್ಲೋಡ್ ಮಾಡಬೇಕು. ಈ ದಾಖಲೆಗಳನ್ನು ಎರಡೂ ಬದಿಗಳಲ್ಲಿ ಸ್ಕ್ಯಾನ್ ಮಾಡುವುದು ಕಡ್ಡಾಯವಾಗಿದೆ.
– ಪ್ರಕ್ರಿಯೆ ಪೂರ್ಣಗೊಂಡ ನಂತರ, ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದು ನಿಮಗೆ ಸೇವಾ ವಿನಂತಿ ಸಂಖ್ಯೆಯನ್ನು ನೀಡುತ್ತದೆ. ಕೆವೈಸಿ ನವೀಕರಣ ಮಾಹಿತಿಯನ್ನು ನಂತರ ಗ್ರಾಹಕರಿಗೆ ಸಂದೇಶ ಅಥವಾ ಮೇಲ್ ಮೂಲಕ ತಿಳಿಸಲಾಗುತ್ತದೆ.

ನ್ಯಾಯಬೆಲೆ ಅಂಗಡಿಯಲ್ಲಿ ನೀವು ಬ್ಯಾಂಕ್ ಖಾತೆಗೆ ಆಧಾರ್ ಕೂಡ ಲಿಂಕ್ ಮಾಡಿಸಿಕೊಳ್ಳಬಹುದು. ಇದಕ್ಕೆ ಬೇಕಾಗುವ ದಾಖಲೆಗಳು.

1) ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
2)ಕುಟುಂಬದ ಸದಸ್ಯರ ಭಾವಚಿತ್ರ
3)ಕುಟುಂಬದ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ ಮತ್ತು ಬಯೋಮೆಟ್ರಿಕ್
4)ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದಾದರೆ ಪಾಸ್ ಬುಕ್ ವಿವರ ಬೇಕಾಗುತ್ತದೆ.
ಪಡಿತರದಾರರು ತಪ್ಪದೇ ಇ-ಕೆವೈಸಿ ಮಾಡಬೇಕು. ಇಲ್ಲವಾದಲ್ಲಿ ನಿಮಗೆ ರೇಷನ್ ಸಿಗಲ್ಲ. ಅನೇಕರು ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಲ್ಲ, ದಯವಿಟ್ಟು ಈ ಕೆಲಸ ಮಾಡಿಕೊಳ್ಳಿ. ಹಾಗೂ ಕುಟುಂಬ ಸದಸ್ಯರ e-kyc ಅಪ್ಡೇಟ್ ಆಗದಿರುವುದು ಅಥವಾ ನೀಡಿರುವ ಆಧಾರ್ ಕಾರ್ಡ್ ಮಾಹಿತಿ ತಪ್ಪಾಗಿರುವುದು , ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿರುವುದು ಈ ಎಲ್ಲಾ ಕಾರಣದಿಂದ ಹಲವರು ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣದಿಂದ ವಂಚಿತರಾಗಿದ್ದಾರೆ. ಆದ್ದರಿಂದ ತಪ್ಪದೇ ನೀವು ಈ ಕೆಲಸ ಮಾಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...