alex Certify BIG NEWS : ‘NEET UG’ ಅರ್ಹತೆ ಪಡೆದ ಅಭ್ಯರ್ಥಿಗಳ ಗಮನಕ್ಕೆ : ಜು.24 ರಿಂದ ದಾಖಲೆ ಪರಿಶೀಲನೆ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘NEET UG’ ಅರ್ಹತೆ ಪಡೆದ ಅಭ್ಯರ್ಥಿಗಳ ಗಮನಕ್ಕೆ : ಜು.24 ರಿಂದ ದಾಖಲೆ ಪರಿಶೀಲನೆ ಆರಂಭ

ಬೆಂಗಳೂರು:  ‘NEET’ ಯುಜಿ ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಪ್ರಕ್ರಿಯೆ ಜುಲೈ 24 ರಿಂದ ಆರಂಭವಾಗಲಿದೆ.

2023 ನೇ ಸಾಲಿನ ಯುಜಿ ನೀಟ್ ವೈದ್ಯಕೀಯ, ಆಯು ರ್ವೇದ, ದಂತ ವೈದ್ಯಕೀಯ, ನ್ಯಾಚುರೋಪತಿ ಮತ್ತು ಯೋಗ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ಗಳಿಸಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಕರ್ನಾ ಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದ್ದು, ಜು.24ರಿಂದ ಆಗಸ್ಟ್ 1ರವರೆಗೆ ಮಲ್ಲೇಶ್ವರಂನಲ್ಲಿ ರುವ ಪ್ರಾಧಿಕಾರದ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ.

ಅಭ್ಯರ್ಥಿಗಳು ತಮ್ಮ ರ್ಯಾಂಕಿಂಗ್ ಗೆ ತಕ್ಕಂತೆ ನಿಗದಿಪಡಿಸಿರುವ ದಿನಾಂಕದಂದು ಹಾಜರಾಗಿ ದಾಖಲೆಗಳ ಪರಿಶೀಲನೆ ನಡೆಸಿಕೊಳ್ಳ ಬೇಕು. ಈಗಾಗಲೇ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಪ್ರಾಧಿಕಾರ ನಡೆಸಿದ ಯುಜಿಸಿಇಟಿಯಲ್ಲಿ ರ್ಯಾಂಕಿಂಗ್ ಮೂಲಕ ಅರ್ಹತೆ ಪಡೆದು ದಾಖಲೆ ಪರಿಶೀಲನೆಗೆ ಹಾಜರಾಗಿರುವವರು ಈಗ ಯುಜಿ ನೀಟ್ ವೈದ್ಯ ಕೋರ್ಸುಗಳ ಪ್ರವೇಶಕ್ಕೆ ಮತ್ತೊಮ್ಮೆ ದಾಖಲೆ ಪರಿಶೀಲನೆಗೆ ಹಾಜರಾಗುವ ಅಗತ್ಯವಿಲ್ಲ.. ಹೆಚ್ಚಿನ ಮಾಹಿತಿಗೆ www.kea.kar.nic.in ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...