ಬೆಂಗಳೂರು : ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ –ಎ ಹಾಗೂ ಗ್ರೂಪ್ –ಬಿ ವೃಂದದ 384 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಏ.15 ಕೊನೆಯ ದಿನಾಂಕವಾಗಿದೆ.
2023-24ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು, 1997ರಡಿ ಈ ಕೆಳಕಂಡ ವೃಂದಗಳಲ್ಲಿನ ಗ್ರೂಪ್-ಎ ಮತ್ತು ಗ್ರೂಪ್ ಬಿ ಹುದ್ದೆಗಳ ರಿಕ್ತ ಸ್ನಾನಗಳನ್ನು ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳಂತೆ ವರ್ಗೀಕರಣ ಮಾಡಿ ಅನುಬಂಧ-1 ರಿಂದ 22ಎ ರವರೆಗೆ ಲಗತ್ತಿಸಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಬಿಡುಗಡೆ ಮಾಡಲಾಗಿತ್ತು.
ಕೆಎಎಸ್ ಹುದ್ದೆಗಳ ಭರ್ತಿಗೆ ದಿನಾಂಕ 04-03-2024ರಿಂದ http://kpsc.kar.nic.in ಜಾಲತಾಣದಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸಲು ದಿನಾಂಕ 03-04-2024 ಕೊನೆಯ ದಿನಾಂಕವಾಗಿತ್ತು. ನಂತರ ಏ.15 ರವರೆಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಲಾಗಿತ್ತು.
ಬೇಕಾಗುವ ದಾಖಲೆಗಳು
ಹೆಸರು
ಎಸ್ಎಸ್ಎಲ್ಸಿ ಅಂಕಪಟ್ಟಿ
ವೈಯಕ್ತಿಕ ವಿವರಗಳು
ಮೊಬೈಲ್ ನಂಬರ್
ಶೈಕ್ಷಣಿಕ ವಿವರಗಳು,
ಅಂಕಪಟ್ಟಿಗಳು.
ಸಹಿ ಸ್ಕ್ಯಾನ್ ಪ್ರತಿ
ಕಾಪಿ.
ಭಾವಚಿತ್ರ ಸ್ಕ್ಯಾನ್ ಕಾಪಿ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ , ಆಧಾರ್ ಕಾರ್ಡ್