alex Certify BIG NEWS: ನ.1ರಿಂದ ಬದಲಾಗಲಿದೆ ಈ ಎಲ್ಲ ಸೇವೆ – ಗ್ರಾಹಕರ ಜೇಬಿಗೆ ಬೀಳಲಿದೆ ಮತ್ತಷ್ಟು ಕತ್ತರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನ.1ರಿಂದ ಬದಲಾಗಲಿದೆ ಈ ಎಲ್ಲ ಸೇವೆ – ಗ್ರಾಹಕರ ಜೇಬಿಗೆ ಬೀಳಲಿದೆ ಮತ್ತಷ್ಟು ಕತ್ತರಿ

ನವೆಂಬರ್ ತಿಂಗಳು ಶುರುವಾಗ್ತಿದೆ. ಹೊಸ ತಿಂಗಳು ಶುರುವಾಗ್ತಿದ್ದಂತೆ ಅನೇಕ ಬದಲಾವಣೆಯಾಗುತ್ತದೆ. ಇದು ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನವೆಂಬರ್ ಒಂದರಿಂದ  ದೇಶದಾದ್ಯಂತ ಅನೇಕ ದೊಡ್ಡ ಬದಲಾವಣೆಯಾಗಲಿದೆ.

ನವೆಂಬರ್ 1ರಿಂದ ಬ್ಯಾಂಕ್ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇಡುವುದರಿಂದ ಹಿಡಿದು ಹಣ ವಿತ್ ಡ್ರಾ ಮಾಡುವವರೆಗೆ ಎಲ್ಲ ಸೇವೆಗೆ ಶುಲ್ಕ ವಿಧಿಸಲಾಗುತ್ತದೆ. ರೈಲ್ವೆ  ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲಿದೆ. ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ನಿಯಮಗಳಲ್ಲಿ ಭಾರೀ ಬದಲಾವಣೆಯಾಗಲಿದೆ

ನವೆಂಬರ್ 1 ರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಎಲ್‌ಪಿಜಿ ಮಾರಾಟದಲ್ಲಿನ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮತ್ತೊಮ್ಮೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಬ್ಯಾಂಕ್‌ಗಳು, ಹಣ  ಠೇವಣಿ ಹಾಗೂ ಹಣ ವಿತ್ ಡ್ರಾಗೆ ಶುಲ್ಕ ವಿಧಿಸುತ್ತಿದೆ. ಬ್ಯಾಂಕ್ ಆಫ್ ಬರೋಡಾ ಈಗಾಗಲೇ ಇದನ್ನು ಪ್ರಾರಂಭಿಸಿದೆ. ಖಾತೆದಾರರಿಗೆ ಮೂರು ಬಾರಿ ಠೇವಣಿ ಉಚಿತವಾಗಿರುತ್ತದೆ. ಗ್ರಾಹಕರು ನಾಲ್ಕನೇ ಬಾರಿ ಹಣವನ್ನು ಠೇವಣಿ ಮಾಡಿದರೆ 40 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಜನ್ ಧನ್ ಖಾತೆದಾರರಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ವಿತ್ ಡ್ರಾಗೆ 100 ರೂಪಾಯಿ ಪಾವತಿಸಬೇಕು.

ಭಾರತೀಯ ರೈಲ್ವೇ ದೇಶಾದ್ಯಂತ ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಿದೆ. 13 ಸಾವಿರ ಪ್ಯಾಸೆಂಜರ್ ರೈಲುಗಳು ಮತ್ತು 7 ಸಾವಿರ ಗೂಡ್ಸ್ ರೈಲುಗಳ ಸಮಯ ಬದಲಾಗಲಿದೆ. ದೇಶದಲ್ಲಿ ಸಂಚರಿಸುವ ಸುಮಾರು 30 ರಾಜಧಾನಿ ರೈಲುಗಳ ಸಮಯವೂ ನವೆಂಬರ್ 1 ರಿಂದ ಬದಲಾಗಲಿದೆ.

ನವೆಂಬರ್ 1 ರಿಂದ, ಎಲ್ಪಿಜಿ ಸಿಲಿಂಡರ್ ವಿತರಣೆಯ ಪ್ರಕ್ರಿಯೆ ಬದಲಾಗಲಿದೆ. ಗ್ಯಾಸ್ ಬುಕ್ ಮಾಡಿದ ನಂತರ ಗ್ರಾಹಕರ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಸಿಲಿಂಡರ್ ವಿತರಣೆಗೆ ಬಂದಾಗ ಒಟಿಪಿ ಹೇಳಬೇಕು. ನಂತ್ರವೇ ಸಿಲಿಂಡರ್ ಸಿಗಲಿದೆ.

ನವೆಂಬರ್ 1 ರಿಂದ ಕೆಲವು ಐಫೋನ್ ಮತ್ತು ಆಂಡ್ರಾಯ್ಡ್ ಫೋನ್‌ಗಳಲ್ಲಿ ವಾಟ್ಸ್ ಅಪ್ ಕಾರ್ಯ ನಿರ್ವಹಿಸುವುದಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...