ಬಳ್ಳಾರಿ : ಜಿಲ್ಲೆಯಲ್ಲಿ ಪ್ರಸ್ತಕ ಸಾಲಿಗೆ ಮುಂಗಾರು ಹಂಗಾಮು ಅವಧಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಬೆಳೆ ವಿಮೆ ಯೋಜನೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಹ ರೈತರು ತಮ್ಮ ಬೆಳೆಗಳ ವಿಮೆಗೆ ನೋಂದಾಯಿಸಿಕೊಳ್ಳಬಹುದು ಎಂದು ಜಿಪಂ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ ಮತ್ತು ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘÀಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕ(ಹಳ್ಳಿ, ಗ್ರಾಮಪಂಚಾಯಿತಿ, ಹೋಬಳಿ)ವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರ ನೀಡಲಾಗುವುದು.
ವಿಮಾ ಯೋಜನೆಯಡಿ ಒಳಪಡುವ ನೀರಾವರಿ ಬೆಳೆಗಳಾದ ಕೆಂಪು ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳಾಗಿವೆ.
*ಕೆಂಪು ಮೆಣಸಿನಕಾಯಿ:* ಬಳ್ಳಾರಿ, ಕಂಪ್ಲಿ, ಕುರುಗೋಡು, ಕೋಳೂರು, ಮೋಕಾ, ರೂಪನಗುಡಿ, ಸಿರುಗುಪ್ಪ, ಕರೂರು, ತೆಕ್ಕಲಕೋಟೆ, ಹಚ್ಚೋಳ್ಳಿ, ತೋರಣಗಲ್ಲು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ ರೂ.1,07,500 ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ರೂ.5,375 ಆಗಿರುತ್ತದೆ.
*ಈರುಳ್ಳಿ:* ಸಂಡೂರು ತಾಲ್ಲೂಕಿನ ಚೋರನೂರು ಹಾಘೂ ತೋರಣಗಲ್ಲು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ ರೂ.80,500 ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ರೂ.4,025 ಆಗಿರುತ್ತದೆ.
ರೈತರು ಅಗತ್ಯ ದಾಖಲೆಗಳೊಂದಿಗೆ ಎರಡು ಬೆಳೆಗಳ ವಿಮೆಗೆ ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮತ್ತು ಕುರುಗೋಡು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08392-278177 ಹಾಗೂ ಮೊ.9480257282, ಸಂಡೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08395-260389 ಹಾಗೂ ಮೊ.9740934208, ಕಂಪ್ಲಿ ಮತ್ತು ಸಿರುಗುಪ್ಪದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08396-222066 ಹಾಗೂ ಮೊ.9448910277 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.