ಬಳ್ಳಾರಿ : ಕೃಷಿ ಇಲಾಖೆ ವತಿಯಿಂದ 2023-24ನೇ ಸಾಲಿನ ಬಳ್ಳಾರಿ ತಾಲ್ಲೂಕು ಮತ್ತು ಕುರುಗೋಡು ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಶೇ.50 ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ.
ಕೃಷಿ ಹೊಂಡ ನಿರ್ಮಾಣದಿಂದ ಕೃಷಿಗೆ ಅಗತ್ಯ ಪ್ರಮಾಣದ ನೀರು ಸಂಗ್ರಹಿಸುವ ಜತೆಗೆ ಅಂತರ್ಜಲ ಅಭಿವೃದ್ಧಿಗೆ ಸಹಕಾರಿಯಾಗುವುದು ಹಾಗೂ ಖುಷ್ಕಿ ಭೂಮಿಯ ರೈತರಿಗೆ ಬೆಳೆ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರಿನ ಕೊರತೆ ನೀಗಿಸಿ ಉತ್ತಮ ಬೆಳೆ ಕಾಪಾಡಿ ರೈತರು ಆರ್ಥಿಕ ಅಭಿವೃದ್ಧಿ ಹೊಂದಲು ಈ ಯೋಜನೆಯು ಉದ್ದೇಶವಾಗಿದೆ. 21*21*3 ಮೀ. ಅಳತೆಯ ಕೃಷಿ ಹೊಂಡ ನಿರ್ಮಿಸಿಕೊಂಡಲ್ಲಿ ಕೆಂಪು ಮಣ್ಣಿಗೆ ರೂ.52 ಸಾವಿರ ಮತ್ತು ಕಪ್ಪು ಮಣ್ಣಿಗೆ ರೂ.45ಸಾವಿರಗಳನ್ನು ಇಲಾಖೆಯಿಂದ ಸಹಾಯಧನವಾಗಿ ನೀಡಲಾಗುವುದು. ಆಸಕ್ತ ರೈತರು ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಮೊ.8722934294, ಬಳ್ಳಾರಿ ರೈತ ಸಂಪರ್ಕ ಕೇಂದ್ರ ಮೊ.8277930411, ರೂಪನಗುಡಿ ರೈತ ಸಂಪರ್ಕ ಕೇಂದ್ರ ಮೊ.8277930425, ಮೋಕಾ ರೈತ ಸಂಪರ್ಕ ಕೇಂದ್ರ ಮೊ.8277934297, ಕುರುಗೋಡು ರೈತ ಸಂಪರ್ಕ ಕೇಂದ್ರ ಮೊ.8277934300, ಕೋಳೂರು ರೈತ ಸಂಪರ್ಕ ಕೇಂದ್ರ ಮೊ.6360645255 ಹಾಗೂ ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳನ್ನು ಸಂಪರ್ಕಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.