ಶಿವಮೊಗ್ಗ : ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಸಹಯೋಗದೊಂದಿಗೆ ಜ.10 ಮತ್ತು 11 ರಂದು ನಗರದ ವಿನೋಬನಗರದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ರೈತರಿಗೆ ಮೇವು ಬೆಳೆಗಳ ಕುರಿತು ತರಬೇತಿಯನ್ನು ಆಯೋಜಿಸಲಾಗಿದೆ.
ತರಬೇತಿ ಕಾರ್ಯಕ್ರಮದಲ್ಲಿ ಮಲೆನಾಡು ಗಿಡ್ಡತಳಿ ಹೊಂದಿರುವ ಸಣ್ಣ ಹಿಡುವಳಿದಾರಿಗೆ ಹಸಿರು ಮೇವಿನ ತಳಿಗಳ ಪ್ರದರ್ಶನ ಹಾಗೂ ಮೇವಿನ ಬೆಳೆಗಳ ಬೇಸಾಯ ಕ್ರಮಗಳು, ಮೇವು ಬೀಜಗಳ ಸಂಸ್ಕರಣೆ ಹಾಗೂ ಮೇವಿನ ತಳಿಗಳ ಪಸರಣೆ (ಪ್ರಾಯೋಗಿಕ ತರಬೇತಿ), ಹುಲ್ಲುಗಾವಲು ನಿರ್ವಹಣೆಯ ಅಗತ್ಯತೆಯ ಕುರಿತಾದ ವಿವಿಧ ವಿಷಯಗಳು ಒಳಗೊಂಡಿರುತ್ತದೆ. ಮಲೆನಾಡು ಗಿಡ್ಡ ತಳಿಯ ಹಾಲು, ಸಗಣಿ ಮತ್ತು ಗಂಜಳದಿಂದ ತಯಾರಿಸಲಾದ ವಿವಿಧ ಉತ್ಪನ್ನಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ತಮ್ಮ ಹೆಸರನ್ನು ಡಾ. ಹರೀಶ್ ಎಂ.-9470747820 ಹಾಗೂ ಡಾ. ವೆಂಕಟೇಶ್ -9482373685 ಮೊಬೈಲ್ ನಂ.ಗಳಿಗೆ ಎಸ್.ಎಂ.ಎಸ್./ವಾಟ್ಸ್ಪ್ ಮೂಲಕ ಅಥವಾ ರಾ.ಕೃ.ವಿಕಾಸ ಯೋಜನಾ ಸಂಯೋಜಕರು, ಪ್ರಾಣಿ ಅನುವಂಶೀಯತೆ ಹಾಗೂ ತಳಿಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿನೋಬನಗರ, ಶಿವಮೊಗ್ಗ ಇಲ್ಲಿ ನೇರ ಸಂಪರ್ಕ ಮಾಡಿ ನೊಂದಾಯಿಸಿಕೊಳ್ಳುವಂತೆ ವಿಭಾಗದ ಸಹ ಪ್ರಾಧ್ಯಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.