ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ( BWSSB ) ಕೆಲವು ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಜನವರಿ 26 ರ ಗಣರಾಜ್ಯೋತ್ಸವದಂದು ನಗರದ ಹಲವಾರು ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ನೀರು ಸರಬರಾಜು ನಿರ್ವಹಣೆ ಮತ್ತು ಕೊಳಚೆ ನೀರನ್ನು ಸಂಸ್ಕರಿಸುವ ಜವಾಬ್ದಾರಿಯನ್ನು BWSSB ಹೊಂದಿದೆ.
ಈ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ
ಮಹಾಲಕ್ಷ್ಮಿ ಲೇಔಟ್, ಜೆ.ಸಿ.ನಗರ, ಶ್ರೀರಾಮನಗರ, ಮುನೇಶ್ವರ ಬ್ಲಾಕ್, ಜೆ.ಎಸ್.ನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಸರಸ್ವತಿಪುರಂ, ಮೈಕೋಲೇಔಟ್, ಗಣೇಶ ಬ್ಲಾಕ್, ರಾಜಾಜಿನಗರ, ಭುವನೇಶ್ವರಿನಗರ, ಡಾ.ರಾಜ್ ಕುಮಾರ್ ರಸ್ತೆ, ಪ್ರಕಾಶ್ ನಗರ, ಸುಬ್ರಮಣ್ಯ ನಗರ, ಗಾಯತ್ರಿ ನಗರದ ಕೆಲವು ಭಾಗಗಳು, ಮಿಲ್ಕ್ ಕಾಲೋನಿ, ನಂದಿನಿ ಲೇಔಟ್, ಶಂಕರ್ ನಗರ, ರಾಜೀವ್ ಗಾಂಧಿ ನಗರ, ಕೆಎಚ್ ಬಿ ಕಾಲೋನಿ, ಯಶವಂತಪುರ ಎಪಿಎಂಸಿ ಮತ್ತು ಆರ್ ಎಂಸಿ ಯಾರ್ಡ್, ಗೊರಗುಂಟೆಪಾಳ್ಯ, ಬಿಇಎಂಎಲ್ ಲೇಔಟ್, ಗೊರಗುಂಟೆಪಾಳ್ಯ. ಕುವೆಂಪು ಪಾರ್ಕ್, ಎಸ್ ವಿಕೆ ಲೇಔಟ್, ಕರ್ನಾಟಕ ಲೇಔಟ್, ಕಾವೇರಿ ನಗರ, ವೈಯಾಲಿಕಾವಲ್, ಲಕ್ಷ್ಮಿ ನಗರ, ಕಿರ್ಲೋಸ್ಕರ್ ಕಾಲೋನಿ, ಎಲ್ ಐಸಿ
ಕಾಲೋನಿ, ಟೀಚರ್ಸ್ ಕಾಲೋನಿ, ಕಾಮಾಕ್ಷಿಪಾಳ್ಯ, ಎಸ್ ಬಿಐ ಅಧಿಕಾರಿಗಳ ಕಾಲೋನಿ, ಶಾರದಾ ಕಾಲೋನಿ, ಮಾರುತಿ ನಗರ, ಚಂದ್ರನಗರ, ಚೆನ್ನಿಗಪ್ಪ ಲೇಔಟ್, ಎ.ಕೆ.ಕಾಲೋನಿ, ನಂಜಪ್ಪ ಲೇಔಟ್, ಮಂಜುನಾಥನಗರ, ಜಡ್ಜ್ಸ್ ಕಾಲೋನಿ, ಶಿವನಗರ, ಮಹಾಲಕ್ಷ್ಮಿಪುರಂ, ಅಗ್ರಹಾರ ದಾಸರಹಳ್ಳಿ, ಕಂಠೀರವ ಕಾಲೋನಿ, ನಾಗರಬಾವಿ, ಎನ್ ಜಿಇಎಫ್ ಲೇಔಟ್, ವಿಧಾನಸೌಧ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ, ಲಗ್ಗೆರೆ, ರಾಜಗೋಪಾಲನಗರ, ದೀಪಾಂಜಲಿನಗರ, ಕೆ.ಪಿ. ನಾಯಂಡಹಳ್ಳಿ, ಬಾಪೂಜಿ ಲೇಔಟ್, ಸುಬ್ಬಣ್ಣ ಗಾರ್ಡನ್ ಮತ್ತು ಮಾರೇನಹಳ್ಳಿ.