ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಅಕ್ಟೋಬರ್ 18 ರಂದು ನಾಳೆ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತವನ್ನು ಘೋಷಿಸಿವೆ.
ನಾಳೆ ಬುಧವಾರ ಎಲ್ಲೆಲ್ಲಿ ಪವರ್ ಕಟ್
ಬೊಮ್ಮನ ಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಚಿಕ್ಕ ಬೇಗೂರು ಗೇಟ್, ಬಿಟಿಆರ್ ಗಾರ್ಡನ್, ಕೋನ್ಕೋರ್ಡ್ ಲೇಔಟ್, ಮುನೇಶ್ವರ್ ಲೇಔಟ್, ಹೋಸೂರ್ ಮುಖ್ಯ ರಸ್ತೆ, ಬಂಡೆಪಾಳ್ಯ, ಸಿಂಗಸಂದ್ರ, ಜಿಬಿ ಪಾಳ್ಯ, ಎಇಸಿಎಸ್ ಲೇಔಟ್, ಎ ಮತ್ತು ಬಿ ಬ್ಲಾಕ್, ಹೊಂಗಸಂದ್ರ, ಬೊಮ್ಮನಹಳ್ಳಿ (ಬೇಗೂರು ಮುಖ್ಯ ರಸ್ತೆ), ಹರಲುಕುಂತೆ, ಹೊಸಪಾಳ್ಯ, ಯಲ್ಲುಕುಂಟೆ ಸೇರಿ ಹಲವು ಕಡೆ ವಿದ್ಯುತ್ ಕಡಿತವಾಗಲಿದೆ.