alex Certify ಬೆಂಗಳೂರಿಗರೇ ಗಮನಿಸಿ : ರಸ್ತೆಗಳಲ್ಲಿ ಗುಂಡಿಗಳಿದ್ರೆ ಫೋಟೋ ಕ್ಲಿಕ್ಕಿಸಿ ಜಸ್ಟ್ ಹೀಗೆ ದೂರು ಸಲ್ಲಿಸಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರೇ ಗಮನಿಸಿ : ರಸ್ತೆಗಳಲ್ಲಿ ಗುಂಡಿಗಳಿದ್ರೆ ಫೋಟೋ ಕ್ಲಿಕ್ಕಿಸಿ ಜಸ್ಟ್ ಹೀಗೆ ದೂರು ಸಲ್ಲಿಸಿ.!

ಬೆಂಗಳೂರು : ಬೆಂಗಳೂರು ನಗರದಾದ್ಯಂತ ಇರುವ ಗುಂಡಿಗಳನ್ನು ಗುರುತಿಸಲು ಮತ್ತು ನಿಗದಿತ ಕಾಲಮಿತಿಯೊಳಗೆ ಸರಿಪಡಿಸಲು ಪೂರಕವಾಗುವಂತೆ ಬಿಬಿಎಂಪಿಯು ರಸ್ತೆ ಗುಂಡಿ ಗಮನ (Fix Pothole) ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.

ರಸ್ತೆಗುಂಡಿ ಇರುವ ಪ್ರದೇಶಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುವಂತೆ ಆ್ಯಪ್ ರೂಪಿಸಲಾಗಿದೆ. ಜೊತೆಗೆ ಗುಂಡಿ ಮುಚ್ಚುವ ಕಾಮಗಾರಿ ಪ್ರಗತಿಯ ಹಂತವನ್ನೂ ಆ್ಯಪ್ ಮೂಲಕ ವೀಕ್ಷಿಸಬಹುದಾಗಿದೆ. ಬಿಬಿಎಂಪಿ ಸಿಬ್ಬಂದಿ, ಸಂಚಾರ ಪೊಲೀಸರು ಜೊತೆಗೆ ಸಾರ್ವಜನಿಕರೂ ಸಹ ಗುಂಡಿಗಳ ಬಗ್ಗೆ ವರದಿ ಮಾಡಬಹುದಾಗಿದೆ.

ರಸ್ತೆ ಗುಂಡಿ ಗಮನ (Fix Pothole)  ಆ್ಯಪ್ ಹೇಗೆ ಕಾರ್ಯನಿರ್ವಹಿಸಲಿದೆ?

• Play store ನಲ್ಲಿ Fix Pothole / ರಸ್ತೆ ಗುಂಡಿ ಗಮನ ಎ೦ದು ಟೈಪ್ ಮಾಡಿ ಆ್ಯಪ್ ಡೌನ್ಲೋಡ್  ಮಾಡಿಕೊಳ್ಳಿ.
• ಒಟಿಪಿ ಬಳಸಿ ಆ್ಯಪ್ ರಿಜಿಸ್ಟ್ರೇಷನ್ ಮಾಡಿದ ಬಳಿಕ Report a Pothole e ಪತ್ತೆಯಾಗುತ್ತದೆ. ಜೊತೆಗೆ ಫೋಟೋ ಹಂಚಿಕೊಳ್ಳುವ ಆಯ್ಕೆ ಸಿಗುತ್ತದೆ. ದೂರಿನ ವಿವರ ಅಲ್ಲೇ ದಾಖಲಿಸಬಹುದಾಗಿದೆ.
• ಕೆಲಸದ ಪ್ರಗತಿಯ ಕುರಿತು ದೂರುದಾರರು ಟ್ರ್ಯಾಕ್ ಮಾಡಬಹುದು.
• ಬಳಕೆದಾರರು ಒಮ್ಮೆ ಲಾಗಿನ್ ಆದರೆ ಸಾಕು, ಮತ್ತೊಮ್ಮೆ ಲಾಗಿನ್ ಆಗುವ ಅವಶ್ಯಕತೆ ಇರುವುದಿಲ್ಲ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...