alex Certify ಬೆಂಗಳೂರಿಗರೇ ಗಮನಿಸಿ : ನೀರಿನ ಸಮಸ್ಯೆ ಪರಿಹಾರಕ್ಕೆ ನಾಲ್ಕು ಆ್ಯಪ್ ಬಿಡುಗಡೆ, ಇಲ್ಲಿದೆ ಡೀಟೇಲ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರೇ ಗಮನಿಸಿ : ನೀರಿನ ಸಮಸ್ಯೆ ಪರಿಹಾರಕ್ಕೆ ನಾಲ್ಕು ಆ್ಯಪ್ ಬಿಡುಗಡೆ, ಇಲ್ಲಿದೆ ಡೀಟೇಲ್ಸ್..!

ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ʼನೀರು ಉಳಿಸಿ ಬೆಂಗಳೂರು ಬೆಳೆಸಿʼ ಅಭಿಯಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.

ಅಂತರ್ಜಲ, ಜಲಸಂರಕ್ಷಕ, ಜಲಮಿತ್ರ, ಜಲಸ್ನೇಹಿ ಎಂಬ 4 ವೆಬ್ ಆ್ಯಪ್ಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಿಡುಗಡೆಗೊಳಿಸಿದ್ದಾರೆ.

1) ಅಂತರ್ಜಲ: ಬೆಂಗಳೂರು ನಗರದ ನಾಗರಿಕರು ಮನೆಯಲ್ಲಿಯೇ ಕುಳಿತು ಈ ಆ್ಯಪ್ ಮೂಲಕ ಕೊಳವೆಬಾವಿ ಕೊರೆಯಲು ಅನುಮತಿ ಪಡೆಯಲು ಅರ್ಜಿ ಸಲ್ಲಿಸಬಹುದು, ನಿರಾಕ್ಷೇಪಣಾ ಪತ್ರವನ್ನೂ ಪಡೆಯಬಹುದು.

2) ಜಲಸ್ನೇಹಿ: ಸಾರ್ವಜನಿಕರು ಕುಡಿಯುವುದಕ್ಕೆ ಹೊರತಾಗಿ ಇನ್ನಿತರ ಕಾರ್ಯಗಳಿಗೆ ಬಳಕೆ ಮಾಡಲು ಸಂಸ್ಕರಿಸಿದ ನೀರನ್ನು ಈ ಆ್ಯಪ್ ಮೂಲಕ ಕಾಯ್ದಿರಿಸಿ, ಸರಬರಾಜು ಮಾಡಬಹುದು.

3) ಜಲಮಿತ್ರ: ನೀರಿನ ಸೋರಿಕೆ, ಒಳಚರಂಡಿ ನೀರು ಉಕ್ಕಿ ಹರಿಯುವುದು, ಜಲಮಂಡಳಿಯ ಅಗತ್ಯ ದಾಖಲೆಗಳ ಸರ್ವೆ ಮತ್ತು ಇನ್ನಿತರೆ ಕಾರ್ಯಗಳಿಗೆ ಜಲಮಂಡಳಿಗೆ ಸ್ವಯಂ ಸೇವೆ ನೀಡಲು ಇಚ್ಛಿಸುವ ನಾಗರಿಕರು, ಎನ್ಜಿಒಗಳು, ನಿವೃತ್ತ ತಾಂತ್ರಿಕ ಸಿಬ್ಬಂದಿ ಈ ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಬಹುದು.

4) ಜಲ ಸಂರಕ್ಷಕ: ಕುಡಿಯುವ ನೀರಿನ ಬಳಕೆಯನ್ನು ಉಲ್ಲಂಘಿಸಿದವರಿಗೆ ಜಲಮಂಡಳಿ ಸಿಬ್ಬಂದಿ ಈ ಆ್ಯಪ್ ಮೂಲಕ ಸ್ಥಳದಲ್ಲಿಯೇ ದ೦ಡ ವಿಧಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...