ಬೆಂಗಳೂರು : ಬೆಂಗಳೂರಿನಲ್ಲಿ ನೀರಿಗಾಗಿ ಜನರು ಪರದಾಡುವಂತಾಗಿದ್ದು, ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಜನತೆ ಹೆಚ್ಚಿನ ಹಣ ನೀಡಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ.
ಇದರ ನಡುವೆ ಬೆಂಗಳೂರಿನ ಜಲಮಂಡಳಿ ನಲ್ಲಿಗಳಲ್ಲಿ ಕಡ್ಡಾಯವಾಗಿ Flow Restrictor/Aerator ಸಾಧನ ಅಳವಡಿಸಬೇಕೆಂದು ಆದೇಶ ಹೊರಡಿಸಿದೆ. ಮಾ.31 ರೊಳಗೆ ಈ ಸಾಧನವನ್ನು ಅಳವಡಿಸದೇ ಇದ್ರೆ 5000 ದಂಡ ವಿಧಿಸಲಾಗುತ್ತದೆ ಎಂದು ಸೂಚನೆ ನೀಡಲಾಗಿತ್ತು. ಇದೀಗ ಇದನ್ನು ಏಪ್ರಿಲ್ 7 ರ ತನಕ ವಿಸ್ತರಿಸಲಾಗಿದೆ. ಏಪ್ರಿಲ್ 7 ರೊಳಗಾಗಿ Flow Restrictor/Aerator ಸಾಧನ ಅಳವಡಿಸಬೇಕೆಂದು ಸೂಚನೆ ನೀಡಲಾಗಿದೆ,
ನಗರದ ಮಾಲ್ ಗಳಿಂದ ಹಿಡಿದು ವಾಣಿಜ್ಯ ಸಂಕೀರ್ಣ, ಅಪಾರ್ಟ್ ಮೆಂಟ್, ಹೋಟೆಲ್, ರೆಸ್ಟೋರೆಂಟ್ ಸೇರಿ ಎಲ್ಲಾ ಕಡೆ ನಲ್ಲಿಗಳಲ್ಲಿ ಕಡ್ಡಾಯವಾಗಿ Flow Restrictor/Aerator ಎಂಬ ಸಾಧನವನ್ನು ಅಳವಡಿಸಿಕೊಳ್ಳಬೇಕು ಎಂದು ಜಲಮಂಡಳಿ ಆದೇಶ ಹೊರಡಿಸಿತ್ತು. ಮಾ.31 ರೊಳಗೆ ಈ ಸಾಧನವನ್ನು ಅಳವಡಿಸದೇ ಇದ್ರೆ 5000 ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಇದೀಗ ಇದನ್ನು ಏ.7 ರವರೆಗೆ ವಿಸ್ತರಿಸಲಾಗಿದೆ. ಉಲ್ಲಂಘನೆಯು ಮರುಕಳಿಸಿದರೆ ದಂಡದ ಮೊತ್ತ 5000 ರೂ. ಜತೆಗೆ, ಹೆಚ್ಚುವರಿಯಾಗಿ 500 ರೂ. ಅನ್ನು ಪ್ರತಿದಿನದಂತೆ ದಂಡವಾಗಿ ವಸೂಲಿ ಮಾಡಲಾಗುತ್ತದೆ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ.