ಹೈದರಾಬಾದ್ : ಅತ್ಯಾಚಾರ ಯತ್ನದಿಂದ ತಪ್ಪಿಸಿಕೊಳ್ಳಲು 23 ವರ್ಷದ ಯುವತಿಯೊಬ್ಬಳು ಚಲಿಸುತ್ತಿರುವ ಎಂಎಂಟಿಎಸ್ ರೈಲಿನಿಂದ ಜಿಗಿದ ಘಟನೆ ಹೈದರಾಬಾದ್ ಹೊರವಲಯದಲ್ಲಿ ನಡೆದಿದೆ.
ಕೊಂಪಲ್ಲಿ ಬಳಿ 25 ವರ್ಷದ ಯುವಕನೊಬ್ಬ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ರೈಲಿನಿಂದ ಜಿಗಿದಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸಿಕಂದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭಾನುವಾರ ಮಹಿಳೆಯ ದೂರಿನ ಮೇರೆಗೆ ರೈಲ್ವೆ ಪೊಲೀಸರು ಬಿಎನ್ಎಸ್ನ ಸೆಕ್ಷನ್ 131, ಸೆಕ್ಷನ್ 75 ರ ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಮೆಡ್ಚಲ್ನ ಹಾಸ್ಟೆಲ್ನಲ್ಲಿ ವಾಸಿಸುವ ಯುವತಿ ತನ್ನ ಫೋನ್ ರಿಪೇರಿ ಮಾಡಲು ಸಿಕಂದರಾಬಾದ್ಗೆ ಬಂದಿದ್ದಳು. ಅವಳು ತನ್ನ ಹಾಸ್ಟೆಲ್ಗೆ ಹಿಂತಿರುಗಲು ತೆಲ್ಲಾಪುರ-ಮೆಡ್ಚಲ್ ಎಂಎಂಟಿಎಸ್ ರೈಲು ಹತ್ತಿದಳು. ಎಂಎಂಟಿಎಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಯುವಕನೊಬ್ಬ ಅಶ್ಲೀಲ ಹೇಳಿಕೆ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಹೆದರಿ ರೈಲಿನಿಂದ ಜಿಗಿದಿದ್ದಾಳೆ. ಸದ್ಯ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ.