
ಜಬಲ್ಪುರ್: ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಮುಕನೊಬ್ಬ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದಾನೆ.
45 ವರ್ಷದ ವ್ಯಕ್ತಿ ಪತ್ನಿ ಮಗ್ಗುಲಲ್ಲೇ ಮಲಗಿದ್ದ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದ ಆಘಾತಕ್ಕೆ ಒಳಗಾದ ಬಾಲಕಿ ಕೂಗಾಡಿದ್ದು, ಎಚ್ಚರಗೊಂಡ ಪತ್ನಿ ಪತಿಗೆ ಅಡ್ಡಿಪಡಿಸಿದ್ದಾಳೆ. ಈ ವೇಳೆ ಕಾಮುಕ ಪರಾರಿಯಾಗಿದ್ದಾನೆ. ರಾತ್ರಿಯೇ ಮಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಿದ ಪತ್ನಿ ಗಂಡನ ವಿರುದ್ಧ ದೂರು ನೀಡಿದ್ದಾಳೆ.
ಪೋಕ್ಸೋ ಸೇರಿದಂತೆ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ. ದಂಪತಿಗೆ 17, 15 ಮತ್ತು 12 ವರ್ಷದ ಮೂವರು ಹೆಣ್ಣುಮಕ್ಕಳಿದ್ದಾರೆ. 12 ವರ್ಷದ ಹುಡುಗಿ ತಾಯಿಯ ಬಳಿ ಮಲಗಿದ್ದಾಗ ತಡರಾತ್ರಿ ಆಕೆಯ ಪಕ್ಕದಲ್ಲೇ ಬಂದು ಮಲಗಿದ ಆರೋಪಿ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಕೂಗಿಕೊಂಡಾಗ ತಾಯಿಗೆ ಎಚ್ಚರಗೊಂಡ ತಾಯಿಗೆ ಶಾಕ್ ಆಗಿದ್ದು, ಈ ವೇಳೆ ಆರೋಪಿ ಪರಾರಿಯಾಗಿದ್ದಾನೆಂದು ಹೇಳಲಾಗಿದೆ.