ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಉದ್ಯಮಿಯೊಬ್ಬರು ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಕುರಿತಾಗಿ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಜಿರೆಯ ಉದ್ಯಮಿ ಪ್ರಭಾಕರ ಹೆಗ್ಡೆ ವಿರುದ್ಧ ಆರೋಪ ಕೇಳಿ ಬಂದಿದ್ದು, ಚಿಕ್ಕಮಗಳೂರು ಜಿಲ್ಲೆ ಅಂಗರವಳ್ಳಿಯ ಮಹಿಳೆ ದೂರು ನೀಡಿದ್ದಾರೆ. ಮಹಿಳೆಯ ಪತಿ ಪ್ರಭಾಕರ ಹೆಗ್ಡೆ ಅವರ ಸಂಸ್ಥೆಗೆ ಕೆಲಸ ಹುಡುಕಿಕೊಂಡು ಬಂದಿದ್ದು, ಮೇ 14ರಂದು ಕೆಲಸಕ್ಕೆ ನಿಯೋಜಿಸಲಾಗಿತ್ತು. ಮಹಿಳೆಗೆ ಧರ್ಮಸ್ಥಳದಲ್ಲಿರುವ ತನ್ನ ಸಂಸ್ಥೆಯಲ್ಲಿ ತಾನೇ ಕೆಲಸಕ್ಕೆ ಬಿಟ್ಟು ಬರುವುದಾಗಿ ಕಾರ್ ನಲ್ಲಿ ಕರೆದುಕೊಂಡು ಹೋದ ಪ್ರಭಾಕರ ಹೆಗ್ಡೆ ನಿನ್ನ ಗಂಡನಿಗೆ ಕೆಲಸ ಕೊಟ್ಟಿದ್ದೇನೆ ಎಂದು ಹೇಳಿ ಕಾರ್ ನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಕೂಗಿಕೊಂಡಾಗ ಸ್ಥಳೀಯರು ಬಂದಿದ್ದಾರೆ. ಅವರು ಬರುವುದನ್ನು ಗಮನಿಸಿ ಅಲ್ಲಿಯೇ ಮಹಿಳೆಯನ್ನು ಬಿಟ್ಟು ಪ್ರಭಾಕರ ಹೆಗ್ಡೆ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.