ತುಮಕೂರು: ತುಮಕೂರಿನ ದಿಬ್ಬೂರಿನಲ್ಲಿರುವ ವಿದೇಶಿ ನಿರಾಶ್ರಿತರ ಕೇಂದ್ರದಲ್ಲಿ ಶುಕ್ರವಾರ ಸಂಜೆ ಪೊಲೀಸರು ಹಾಗೂ ನಿರಾಶ್ರಿತರ ಕೇಂದ್ರದ ಸಿಬ್ಬಂದಿ ಮೇಲೆ ವಿದೇಶಿಗರು ದಾಳಿ ನಡೆಸಿದ್ದಾರೆ.
ಪಿಎಸ್ಐ ಚಂದ್ರಕಲಾ, ಮಹಿಳಾ ಪೊಲೀಸ್ ತಾಸಿನಾಬಾನು, ನಿರಾಶ್ರಿತರ ಕೇಂದ್ರದ ಚಾಲಕ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಮಹಿಳಾ ಪೊಲೀಸರ ಮೇಲೆ ವಿದೇಶಿ ನಿರಾಶ್ರಿತರು ದಾಳಿ ನಡೆಸಿದ್ದಾರೆ.
ನಾಲ್ವರು ವಿದೇಶಿಗರು ಕೈಯಲ್ಲಿ ಚಾಕು ಹಿಡಿದು ಕೊಲೆಗೆ ಯತ್ನಿಸಿದ್ದು, ನಾಲ್ವರು ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಕಾಲುಗಳಿಗೆ ಗಾಯಗಳಾಗಿವೆ. ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ತುಮಕೂರಿನಲ್ಲಿ ವಿದೇಶಿ ಪ್ರಜೆಗಳ ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ. ವೀಸಾ ಅವಧಿ ಮುಗಿದ ನಂತರ ಅಕ್ರಮವಾಗಿ ನೆಲೆಸಿದ ವಿದೇಶಿ ಪ್ರಜೆಗಳನ್ನು ಈ ಕೇಂದ್ರದಲ್ಲಿ ಇರಿಸಲಾಗಿದ್ದು, ಬಾಂಗ್ಲಾ, ನೈಜೀರಿಯಾ ಸೇರಿದಂತೆ ಐದು ದೇಶಗಳ 27 ಮಂದಿ ಇದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆಗೆ ತೆರಳಿದ್ದಾಗ ವಿದೇಶಿಗರು ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.