ನವದೆಹಲಿ: ದೆಹಲಿ ಪೊಲೀಸರು ಸಂಸದ ತೇಜಸ್ವಿ ಸೂರ್ಯ ವಿಚಾರಣೆ ನಡೆಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನೆ ಎದುರು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ವಿಚಾರಣೆ ನಡೆಸಲಾಗಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಮುಖ್ಯ ಗೇಟ್ ನಲ್ಲಿ ಪ್ರತಿಭಟನೆ ನಡೆಸಿದ್ದ ಆರೋಪದ ಮೇಲೆ ಬಿಜೆಪಿ ಯುವ ಮೋರ್ಚಾದ ಎಂಟು ಸದಸ್ಯರನ್ನು ಬಂಧಿಸಿದ ಎರಡು ತಿಂಗಳ ನಂತರ ದೆಹಲಿ ಪೊಲೀಸರು ಕಳೆದ ವಾರ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು 2 ಗಂಟೆಗಳ ಕಾಲ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ತನಿಖಾಧಿಕಾರಿ ವಾಟ್ಸಾಪ್‌ನಲ್ಲಿ ಸಿ.ಆರ್.ಪಿ.ಸಿ. ಸೆಕ್ಷನ್ 41 ಎ ಅಡಿಯಲ್ಲಿ ಸೂರ್ಯ ಅವರಿಗೆ ಎರಡು ನೋಟಿಸ್ ಗಳನ್ನು ನೀಡಿದ್ದು, ದೆಹಲಿಗೆ ಬಂದಾಗ ತನಿಖೆಗೆ ಹಾಜರಾಗುವುದಾಗಿ ಸೂರ್ಯ ಪ್ರತಿಕ್ರಿಯಿಸಿದ್ದರು. ಕಳೆದ ವಾರ ಸೂರ್ಯ ದೆಹಲಿಗೆ ಆಗಮಿಸಿದ್ದು, ತನಿಖಾಧಿಕಾರಿ, ಸ್ಟೇಷನ್ ಹೌಸ್ ಆಫೀಸರ್(ಸಿವಿಲ್ ಲೈನ್ಸ್) ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ.