
ಮಡಿಕೇರಿ: ಶವ ಸಂಸ್ಕಾರದ ವೇಳೆ ಹೆಜ್ಜೇನು ದಾಳಿಯಿಂದ ಓರ್ವ ಸಾವನ್ನಪ್ಪಿದ ಘಟನೆ ಯಲಕನೂರು ಸಮೀಪದ ಕಾಟಿ ಕೊಪ್ಪಲಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಯಲಕನೂರು ಗ್ರಾಮದ ಬಳಿ ಶವಸಂಸ್ಕಾರದ ವೇಳೆ ಗಂಧದಕಡ್ಡಿ ಹಚ್ಚಿದ್ದು, ಇದರ ಹೊಗೆಯಿಂದ ಜೇನುಹುಳಗಳು ದಾಳಿ ಮಾಡಿ ಕಚ್ಚಿದ್ದರಿಂದ ಒಬ್ಬರು ಮೃತಪಟ್ಟು, ಆರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.