ಎಟಿಎಂ ವಹಿವಾಟಿಗೆ ಸಂಬಂಧಿಸಿದಂತೆ ಬ್ಯಾಂಕುಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ 5 ಬಾರಿ ಮಾತ್ರ ಉಚಿತ ವಹಿವಾಟು ಸೌಲಭ್ಯವನ್ನು ನೀಡುತ್ತವೆ. ಈ ನಿಯಮಗಳು ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬೇರೆಯಾಗಿರುತ್ತವೆ. ಮಿತಿ ನಂತ್ರ ಬ್ಯಾಂಕ್ ಗಳು ಪ್ರತಿ ವಹಿವಾಟಿಗೆ ಶುಲ್ಕ ವಿಧಿಸುತ್ತವೆ. ಆದ್ರೆ, ಉಜ್ಜೀವನ್ ಸಣ್ಣ ಹಣಕಾಸು ಬ್ಯಾಂಕ್, ಗ್ರಾಹಕರಿಗೆ ಅನಿಯಮಿತ ಉಚಿತ ಎಟಿಎಂ ಸೌಲಭ್ಯ ಒದಗಿಸಿದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಗ್ರಾಹಕರು ಬ್ಯಾಂಕ್ ಶಾಖೆ ಮತ್ತು ಎಟಿಎಂ ಎರಡರಿಂದಲೂ ಅನಿಯಮಿತ ವಹಿವಾಟು ಮಾಡಬಹುದು. ಗ್ರಾಹಕರು ಯಾವುದೇ ಶುಲ್ಕವಿಲ್ಲದೆ, ಬ್ಯಾಂಕ್ ಅಥವಾ ಎಟಿಎಂಗಳಿಂದ ಹಣದ ವಹಿವಾಟು ನಡೆಸಬಹುದು. ಈ ವಹಿವಾಟಿಗೆ ಬ್ಯಾಂಕ್ ಯಾವುದೇ ಶುಲ್ಕ ವಿಧಿಸುವುದಿಲ್ಲ.
ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಅನೇಕ ಗ್ರಾಹಕರು, ಬ್ಯಾಂಕ್ ಈ ಕ್ರಮವನ್ನು ಸ್ವಾಗತಿಸಿದ್ದಾರೆ.
ಜೂನ್ ನಲ್ಲಿ ಎಟಿಎಂಗಳಿಂದ ನಗದು ಹಿಂಪಡೆಯುವ ನಿಯಮಗಳನ್ನು ಆರ್ಬಿಐ ಬದಲಿಸಿದೆ. ಮಿತಿ ನಂತ್ರ ಶುಲ್ಕ ವಿಧಿಸಲು ಬ್ಯಾಂಕ್ ಗಳಿಗೆ ಅವಕಾಶ ನೀಡಿದೆ. 2022ರಲ್ಲಿ ಶುಲ್ಕ ಹೆಚ್ಚಳಕ್ಕೂ ಆರ್ಬಿಐ ಅವಕಾಶ ನೀಡಿದೆ.