ಶಿವಮೊಗ್ಗ: ಶಿವಮೊಗ್ಗದಲ್ಲಿ ಜೆಸಿಬಿ ಬಳಸಿ ಎಟಿಎಂನಿಂದ ಹಣ ದೋಚಲು ವಿಫಲ ಯತ್ನ ನಡೆಸಲಾಗಿದೆ. ಪೊಲೀಸರನ್ನು ಕಂಡ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.
ಶಿವಮೊಗ್ಗದ ವಿನೋಬನಗರ ಶಿವಾಲಯದ ಮುಂಭಾಗವಿರುವ ಅಕ್ಸಿಸ್ ಬ್ಯಾಂಕ್ ನ ಎಟಿಎಂನಲ್ಲಿ ಜೆಸಿಬಿ ಬಳಸಿ ಹಣ ದೋಚಲು ಯತ್ನ ನಡೆದಿದೆ. ಗಸ್ತಿನಲ್ಲಿದ್ದ ಪೊಲೀಸರನ್ನು ನೋಡಿ ಜೆಸಿಬಿ ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಜೆಸಿಬಿಯನ್ನು ವಿನೋಬನಗರ ಪೊಲೀಸರು ವಶಕ್ಕೆ ಪಡೆದು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.
ಜೆಸಿಬಿಯನ್ನು ಕಳ್ಳತನ ಮಾಡಿ ಅದನ್ನು ಬಳಸಿ ಎಟಿಎಂನಲ್ಲಿ ಹಣ ದೋಚಲು ವಿಫಲ ಯತ್ನ ನಡೆದಿದೆ. ಅನೇಕ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದೇ ಇಂತಹ ಕೃತ್ಯ ನಡೆಯಲು ಕಾರಣವೆನ್ನಲಾಗಿದೆ.