ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುವ ಅವಶ್ಯಕತೆ ಈಗಿಲ್ಲ. ಎಟಿಎಂನಲ್ಲಿ ಅತಿ ಬೇಗ ನಗದು ಪಡೆಯಬಹುದು. ಆದ್ರೆ ಎಟಿಎಂನಲ್ಲಿ ಸಾಕಷ್ಟು ಮೋಸ ನಡೆಯುತ್ತಿದೆ. ಇದನ್ನು ಗಮನಿಸಿರುವ ಸ್ಟೇಟ್ ಬ್ಯಾಂಕ್, ಎಟಿಎಂ ವಹಿವಾಟನ್ನು ಮತ್ತಷ್ಟು ಸುರಕ್ಷಿತಗೊಳಿಸಿದೆ. ಎಟಿಎಂನಿಂದ ಹಣ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ ಮಾಡಿದೆ.
ಎಟಿಎಂನಿಂದ ಹಣ ಹಿಂಪಡೆಯಲು ಒಟಿಪಿ ನಮೂದಿಸಬೇಕಾಗುತ್ತದೆ. ಈ ಹೊಸ ನಿಯಮದ ಪ್ರಕಾರ, ಒಟಿಪಿ ಇಲ್ಲದೆ ಗ್ರಾಹಕರು ನಗದು ಹಿಂಪಡೆಯಲು ಸಾಧ್ಯವಿಲ್ಲ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಒಟಿಪಿ ನಮೂದಿಸಿದ ನಂತ್ರ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಬಹುದಾಗಿದೆ. ಈ ಬಗ್ಗೆ ಬ್ಯಾಂಕ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
10,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯುವಾಗ ಈ ನಿಯಮ ಅನ್ವಯವಾಗಲಿದೆ. ಎಸ್‌ಬಿಐ ಗ್ರಾಹಕರು, ಬ್ಯಾಂಕ್ ಖಾತೆಯಿಂದ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿ ಹಾಕಿ, ಪ್ರತಿ ಬಾರಿ ಎಟಿಎಂಗಳಿಂದ 10,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಬಹುದು. ಒಂದು ಒಟಿಪಿ ಒಂದು ವಹಿವಾಟಿಗೆ ಮಾತ್ರ ಸೀಮಿತವಾಗಿರುತ್ತದೆ.