ಡ್ರೈ ಎಟಿಎಂ ವಿರುದ್ಧ ಆರ್ಬಿಐ ಹೊಸದೊಂದು ನಿಯಮಾವಳಿಯನ್ನು ಸಿದ್ಧಪಡಿಸಿದೆ. ಯಾವ ಎಟಿಎಂಗಳಲ್ಲಿ ನಗದು ಲಭ್ಯ ಇರೋದಿಲ್ಲವೋ ಅಂತಹ ಎಟಿಎಂಗಳನ್ನು ಡ್ರೈ ಎಟಿಎಂ ಎಂದು ಕರೆಯಲಾಗುತ್ತದೆ. ಯಾವುದೇ ಗ್ರಾಹಕ ಎಟಿಎಂನಲ್ಲಿ ಡೆಬಿಟ್ ಕಾರ್ಡ್ ಹಾಕಿದ ಬಳಿಕ ಅವರಿಗೆ ಹಣ ಸಿಗಲಿಲ್ಲ ಬದಲಾಗಿ ಎಟಿಎಂನಲ್ಲಿ ಹಣ ಇಲ್ಲ ಎಂಬ ಸಂದೇಶ ನಿಮಗೆ ಗೋಚರವಾಯ್ತು ಎಂದಾದಲ್ಲಿ ಅದನ್ನು ಡ್ರೈ ಎಟಿಎಂ ಎಂದು ಪರಿಗಣಿಸಬಹುದು. ಈ ವಿಚಾರವಾಗಿ ಹೇಳಿಕೆ ನೀಡಿರುವ ರಿಸರ್ವ್ ಬ್ಯಾಂಕ್, ಯಾವ ಬ್ಯಾಂಕುಗಳು ಡ್ರೈ ಎಟಿಎಂ ಹೊಂದಿರುತ್ತವೆಯೂ ಅಂತಹ ಬ್ಯಾಂಕುಗಳ ವಿರುದ್ಧ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕ ರಿಸರ್ವ್ ಬ್ಯಾಂಕ್ ಟ್ವಿಟರ್ ಅಥವಾ ಫೇಸ್ಬುಕ್ ಪೇಜ್ ಹೊರತುಪಡಿಸಿ 011 23711333 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದಾಗಿದೆ.
ತಿಂಗಳ ಖರ್ಚಿಗೆ ಸಂಬಳ ಸಾಲ್ತಿಲ್ವಾ…? ಹೆಚ್ಚುವರಿ ಗಳಿಕೆಗೆ ಇಲ್ಲಿದೆ ಉಪಾಯ
ಬ್ಯಾಂಕುಗಳನ್ನು ಹೊರತುಪಡಿಸಿ ವೈಟ್ ಲೇಬಲ್ ಎಟಿಎಂ ಆಪರೇಷನ್(WLAO)ಗಳಿಗಾಗಿಯೂ ರಿಸರ್ವ್ ಬ್ಯಾಂಕ್ ಹೊಸ ನಿಯಮ ಜಾರಿ ಮಾಡಿದೆ.WLAO ಕಂಪನಿಯ ಮೂಲಕ ವಿವಿಧ ಬ್ಯಾಂಕುಗಳ ಎಟಿಎಂನಲ್ಲಿ ಹಣ ಹಾಕಲಾಗುತ್ತದೆ. ಎಟಿಎಂನಲ್ಲಿ ಹಣ ಇದೆಯೋ ಇಲ್ಲವೋ ಅನ್ನೋದನ್ನ ನಿಗಾ ವಹಿಸೋದು ಬ್ಯಾಂಕುಗಳ ಕರ್ತವ್ಯವಾಗಿದೆ. ಯಾವ ಬ್ಯಾಂಕ್ ಈ ನಿಯಮ ಪಾಲಿಸುವುದಿಲ್ಲವೋ ಅಂತಹ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಹೊಸ ನಿಯಮವು ಅಕ್ಟೋಬರ್ 1ನೇ ತಾರೀಖಿನಿಂದ ಜಾರಿಗೆ ಬರಲಿದೆ. ಎಟಿಎಂಗಳಲ್ಲಿ ಯಾವಾಗಲು ಹಣ ಇರಬೇಕು ಹಾಗೂ ಹಣವಿಲ್ಲದ ಎಟಿಎಂಗಳಿಂದ ಜನರು ತೊಂದರೆ ಅನುಭವಿಸಬಾರದು ಎಂಬ ಕಾರಣಕ್ಕೆ ಆರ್ಬಿಐ ಈ ನಿಯಮ ರೂಪಿಸಿದೆ.
ಬ್ಯಾಂಕುಗಳು ಯಾವುದೇ ಕಾರಣಕ್ಕೂ ಎಟಿಎಂನಲ್ಲಿ ಹಣ ಖಾಲಿ ಇರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ WLAOಗಳಿಗೆ ಬ್ಯಾಂಕ್ ಸದಾ ಸೂಚನೆ ನೀಡುತ್ತಲೇ ಇರಬೇಕು. ನಗದು ಖಾಲಿಯಾದ ಎಟಿಎಂಗಳಲ್ಲಿ ದಂಡದಿಂದ ಪಾರಾಗುವ ಸಲುವಾಗಿಯಾದರೂ ಕನಿಷ್ಟ ಹಣವನ್ನು ಇಡುವಂತೆ WLAO ಗಳಿಗೆ ಆಯಾ ಬ್ಯಾಂಕ್ ಸೂಚನೆ ನೀಡಬೇಕೆಂದು ಆರ್ಬಿಐ ಹೇಳಿದೆ.
ಕ್ರೀಡೆಯಲ್ಲಿ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ‘ಅಮೃತ ಕ್ರೀಡಾ ಯೋಜನೆ’ಗೆ ಒಪ್ಪಿಗೆ
ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ವ್ಯಕ್ತಿಗೆ ಹಣ ಸಿಗದೇ ಹೋದ ಸಮಯದಲ್ಲಿ ಮಾತ್ರ ಬ್ಯಾಂಕುಗಳಿಗೆ ಈ ದಂಡ ವಿಧಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕ ಬ್ಯಾಂಕ್ ಮೇಲೆ ನೇರವಾಗಿ ಆರ್ಬಿಐ ಬಳಿ ದೂರನ್ನು ಸಲ್ಲಿಸಬಹುದಾಗಿದೆ. ಒಂದು ದಿನದಲ್ಲಿ 10 ಗಂಟೆಗಿಂತ ಹೆಚ್ಚು ಕಾಲ ಎಟಿಎಂನಲ್ಲಿ ಹಣ ಖಾಲಿ ಇರುವಂತಿಲ್ಲ. ಈ ಸಮಯಾವಕಾಶವನ್ನು ಮೀರಿದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಆರ್ಬಿಐ ಹೇಳಿದೆ. ಈ ದಂಡದ ಮೊತ್ತವನ್ನು ಬ್ಯಾಂಕ್ ಬಳಿಕ WLAO ನಿಂದ ವಸೂಲಿ ಮಾಡಿಕೊಳ್ಳಬಹುದಾಗಿದೆ.