ನವದೆಹಲಿ: ಅಸ್ಸಾಂನ ನಜೀರಾ ಲಿಗಿರಿಪುಖುರಿ ಪ್ರದೇಶದಲ್ಲಿ ಎಟಿಎಂ ಯಂತ್ರದಿಂದ ಹಣದ ಬದಲು ಹಾವು ಹೊರ ಬಂದ ಪರಿಣಾಮ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.
ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಗದು ಬದಲಿಗೆ ವಿಷಕಾರಿ ಹಾವು ಹೊರಬಂದಿದೆ. ಶುಕ್ರವಾರ ನಜೀರಾ ಲಿಗಿರಿಪುಖುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಎಟಿಎಂನಿಂದ ಕರೆನ್ಸಿ ನೋಟುಗಳ ನಿರೀಕ್ಷೆಯಲ್ಲಿದ್ದ ವ್ಯಕ್ತಿ ಯಂತ್ರದಿಂದ ವಿಷಪೂರಿತ ನಾಗರ ಹಾವು ಹೊರ ಬರುವುದನ್ನು ಕಂಡು ಶಾಕ್ ಆಗಿ ಕೂಗಾಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಹಾವವನ್ನು ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಟಿಎಂ ಕಿಯೋಸ್ಕ್ ನಲ್ಲಿ ನಗದು ಬದಲು ಹಾವು ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ, ಈ ಹಿಂದೆ, ಗಾಜಿಯಾಬಾದ್ ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು.