
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರೆಸಿದೆ. ಕೊರೊನಾದಿಂದ ತತ್ತರಿಸಿದ್ದ ನೇಯ್ಗೆ ಉದ್ಯಮಕ್ಕೆ ಬಿಜೆಪಿ ಸರ್ಕಾರ ಸಬ್ಸಿಡಿ ಮತ್ತು ಸಹಕಾರ ನೀಡುವ ಮೂಲಕ ತನ್ನ ಕಾಲಮೇಲೆ ನಿಲ್ಲುವಂತೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ವಿದ್ಯುತ್ ಬಿಲ್ ಹೆಚ್ಚಳ ಮಾಡಿ ಉದ್ಯಮಕ್ಕೆ ಬರೆ ಎಳೆದಿದೆ ಎಂದು ಕಿಡಿ ಕಾರಿದೆ.
ATM sarkara ದ ಗ್ಯಾರಂಟಿ ಪ್ರಸಾದವಾಗಿ ವಿದ್ಯುತ್ ಮಗ್ಗಗಳ ಬಿಲ್ ಗಳು ನಾಲ್ಕು ಪಟ್ಟು ಹೆಚ್ಚಾಗಿವೆ. ರಾಜ್ಯಾದ್ಯಂತ 1.2 ಲಕ್ಷ ವಿದ್ಯುತ್ ಮಗ್ಗಗಳ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಕುಟುಂಬಗಳಿಗೆ ಸಿದ್ದರಾಮಯ್ಯ ದೌರ್ಭಾಗ್ಯ ಒದಗಿಸಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ತಕ್ಷಣ ಮಗ್ಗಗಳ ವಿದ್ಯುತ್ ದರ ಇಳಿಸಿ, ಉದ್ಯಮ ಉಳಿಸಿ. ನೇಕಾರರಿಗೆ ಗೌರವಯುತ ಬದುಕು ಬದುಕಲು ಅವಕಾಶ ಕಲ್ಪಿಸಿ ಎಂದು ಬಿಜೆಪಿ ಆಗ್ರಹಿಸಿದೆ.