ಹಣ ವಿತ್ ಡ್ರಾ ಮಾಡುವುದು ಹಾಗೂ ಇನ್ನಿತರ ವಹಿವಾಟುಗಳನ್ನು ಬ್ಯಾಂಕ್ ಶಾಖೆಗೆ ಹೋಗದೆಯೇ ಮಾಡಲೆಂದೇ ಎಟಿಎಂಗಳಿವೆ. ಎಟಿಎಂಗಳ ಮೂಲಕ ನೀವು ಬಿಲ್ ಪಾವತಿಸಬಹುದು, ಹಣವನ್ನು ಡೆಪಾಸಿಟ್ ಮಾಡಬಹುದು, ಹಣವನ್ನು ಖಾತೆಯಿಂದ ಖಾತೆಗೆ ವರ್ಗಾವಣೆ ಕೂಡ ಮಾಡಿಕೊಳ್ಳಬಹುದು.
ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಅಥವಾ ಎಟಿಎಂ ಕಾರ್ಡ್‌ಗಳನ್ನು ಬಳಸಲು ವೈಯುಕ್ತಿಕ ಗುರುತಿನ ಸಂಖ್ಯೆಯ ಅಗತ್ಯವಿರುತ್ತದೆ. ಕೆಲವೊಮ್ಮೆ ಈ ಎಟಿಎಂ ವಹಿವಾಟಿನಲ್ಲೂ ಸಮಸ್ಯೆಗಳಾಗಬಹುದು. ನಿಮ್ಮ ವಹಿವಾಟು ಫೇಲ್ಡ್ ಎಂದು ಬಂದಿದ್ದರೂ ಖಾತೆಯಿಂದ ಹಣ ಡಿಡಕ್ಟ್ ಆಗಿರುವ ಸಾಧ್ಯತೆ ಇರುತ್ತದೆ. ಆರ್‌ಬಿಐ ಪ್ರಕಾರ ಅಂತಹ ಸಂದರ್ಭಗಳಲ್ಲಿ ಬ್ಯಾಂಕ್‌ಗಳು ವಹಿವಾಟನ್ನು ಹಿಮ್ಮುಖಗೊಳಿಸಬೇಕು.
ಎಟಿಎಂ ಕಾರ್ಡ್ ಸಮಸ್ಯೆಯಾದಾಗ ತಕ್ಷಣವೇ ಗ್ರಾಹಕರು ಬ್ಯಾಂಕ್‌ಗೆ ದೂರು ಕೊಡಬೇಕು. ಟ್ರಾನ್ಸಾಕ್ಷನ್ ಫೇಲ್ ಅಂತಾ ಬಂದಿದ್ದರೂ ಹಣ ಡೆಬಿಟ್ ಆಗಿದ್ದರೆ ಐದು ದಿನಗಳೊಳಗೆ ಬ್ಯಾಂಕ್ ಆ ಮೊತ್ತವನ್ನು ಗ್ರಾಹಕರ ಖಾತೆಗೆ ವರ್ಗಾಯಿಸಬೇಕು. 5 ದಿನಗಳೊಳಗೆ ಮೊತ್ತವನ್ನು ಭರಿಸದೇ ಇದ್ದಲ್ಲಿ ಹೆಚ್ಚುವರಿ ಪರಿಹಾರ ಹಣವನ್ನು ಬ್ಯಾಂಕ್ ಕೊಡಬೇಕಾಗುತ್ತದೆ.
ಐದು ದಿನಗಳೊಳಗೆ ಆ ಹಣವನ್ನ ಭರಿಸದೇ ಇದ್ದಲ್ಲಿ ದಿನಕ್ಕೆ 100 ರೂಪಾಯಿಯಂತೆ ಹೆಚ್ಚುವರಿ ಮೊತ್ತವನ್ನು ಬ್ಯಾಂಕ್ ನೀಡಬೇಕು ಎಂಬುದು ಆರ್‌ಬಿಐ ನಿಯಮ. ಇದನ್ನು ಬ್ಯಾಂಕ್‌ಗಳು ಪಾಲಿಸದೇ ಇದ್ದಲ್ಲಿ 30 ದಿನಗಳ ಬಳಿಕ ಗ್ರಾಹಕರು ಆರ್‌ಬಿಐಗೆ ದೂರು ನೀಡಬಹುದು. ಅಥವಾ ಆನ್‌ಲೈನ್‌ನಲ್ಲೂ ದೂರು ದಾಖಲಿಸಲು ಅವಕಾಶವಿದೆ. ಗ್ರಾಹಕರು https://cms.rbi.org.in/cms/indexpage.html#eng (Complaint Management System) ಮೂಲಕ ದೂರು ನೀಡಬಹುದು.