ಫೆಬ್ರವರಿ ತಿಂಗಳಿನಲ್ಲಿ ಎಟಿಎಂ ದೋಚಲು ಯತ್ನಿಸಿದ್ದ ಆರೋಪಿಯೊಬ್ಬ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಸಿ ಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ರಾಯಬಾಗ ತಾಲೂಕಿನ ಭಾವನ ಸೌಂದತ್ತಿ ಗ್ರಾಮದಲ್ಲಿರುವ ಎಟಿಎಂ ನಲ್ಲಿ ಆರೋಪಿ 25 ವರ್ಷದ ಖಾಜಾ ಸಾಬ್ ಬಾಬಾ ಸಾಬ್ ಮುಜಾವರ್ ಎಂಬಾತ ದೋಚಲು ಯತ್ನಿಸಿದ್ದ.
ಇದರ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ರಾಯಭಾಗ ಠಾಣೆ ಪೋಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.