ಉತ್ತರಪ್ರದೇಶದ ಮಾಫಿಯಾ ಡಾನ್ ಅತೀಕ್ ಅಹ್ಮದ್ ಅವರನ್ನು ಹತ್ಯೆಗೈದ ಮೂವರು ಶೂಟರ್‌ಗಳನ್ನು ಪ್ರಯಾಗ್‌ರಾಜ್‌ನ ನೈನಿ ಕೇಂದ್ರ ಕಾರಾಗೃಹದಿಂದ ಪ್ರತಾಪ್‌ಗಢ ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಭದ್ರತೆ ಕಾರಣದಿಂದ ಆರೋಪಿಗಳಾಗ ಲವಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಅವರನ್ನು ಶಿಫ್ಟ್ ಮಾಡಲಾಗಿದೆ.
ಮೂವರು ಶೂಟರ್‌ಗಳನ್ನು ಭಾನುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನಂತರ ನೈನಿ ಜೈಲಿನಲ್ಲಿಡಲಾಗಿತ್ತು. ಎಲ್ಲಾ ಮೂವರು ಆರೋಪಿಗಳನ್ನು ಇತರ ಖೈದಿಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದ್ದು, ಅವರ ಮೇಲೆ ಜೈಲು ಅಧಿಕಾರಿಗಳು ವಿಶೇಷ ನಿಗಾ ವಹಿಸಿದ್ದಾರೆ.
ವಕೀಲ ಉಮೇಶ್ ಪಾಲ್ ಹತ್ಯೆ ಸೇರಿದಂತೆ 100 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಅತೀಕ್ ಅಹ್ಮದ್ ನನ್ನು ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಆತ ಹಾಗೂ ಸಹೋದರನ ಮೇಲೆ ಗುಂಡು ಹಾರಿಸಲಾಗಿತ್ತು. ಮೂವರು ಶೂಟರ್‌ಗಳು ಪತ್ರಕರ್ತರಂತೆ ಬಿಂಬಿಸಿಕೊಂಡು ಅತೀಕ್ ಅಹ್ಮದ್ ಮತ್ತು ಅವರ ಸೋದರನನ್ನು ಹತ್ಯೆ ಮಾಡಿದ್ದರು.