ರಕ್ತದಾನ ಮಹಾದಾನ. ವ್ಯಕ್ತಿಯ ದೇಹದಲ್ಲಿ ರಕ್ತವು ಅತ್ಯಂತ ಮುಖ್ಯವಾದದ್ದು. ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ.
ಮೊದಲ ಬಾರಿ, 1975 ರ ಅಕ್ಟೋಬರ್ 1 ರಂದು, ಭಾರತೀಯ ರಕ್ತದಾನ ಮತ್ತು ಇಮ್ಯುನೊ ಹೆಮಟಾಲಜಿಯಿಂದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನು ಆಚರಿಸಲಾಯಿತು. ರಕ್ತದಾನದ ಮಹತ್ವದ ಬಗ್ಗೆ ಪ್ರಪಂಚದಾದ್ಯಂತ ಜನರಿಗೆ ಅರಿವು ಮೂಡಿಸುವುದು ಇದ್ರ ಉದ್ದೇಶವಾಗಿದೆ. ರಕ್ತವು ವ್ಯಕ್ತಿಯ ದೇಹದಲ್ಲಿನ ಪ್ರಮುಖ ಅಂಶವಾಗಿದೆ. ಇದು ದೇಹದ ಅಂಗಾಂಶಗಳಿಗೆ ಮತ್ತು ಅಂಗಗಳಿಗೆ ಪ್ರಮುಖ ಪೋಷಣೆಯನ್ನು ಒದಗಿಸುತ್ತದೆ.
ರಕ್ತದಾನಕ್ಕಿಂತ ಮೊದಲು ಈ ಕೆಲಸ ಮಾಡಿ:
ರಕ್ತದಾನ ಮಾಡುವ ಮೊದಲು, ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ರೋಗ ನಿಮಗೆ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಬೇಕು.
ರಕ್ತದಾನ ಮಾಡುವ ದಿನವನ್ನು ನೀವು ಆಯ್ಕೆ ಮಾಡಿಕೊಳ್ಳಿ. ಬೇರೆಯವರ ಒತ್ತಾಯಕ್ಕೆ ರಕ್ತದಾನ ಮಾಡಬೇಡಿ. ನಿಮಗೆ ಅನುಕೂಲವೆನಿಸಿದ ದಿನದಂದು ರಕ್ತದಾನ ಮಾಡಿ. ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ ಕೂಡ ಒಳ್ಳೆಯದು.
ಆರೋಗ್ಯಕರ ರಕ್ತವನ್ನು ಕಾಪಾಡಿಕೊಳ್ಳಲು ಕಬ್ಬಿಣವು ಮುಖ್ಯವಾಗಿದೆ. ಆದ್ದರಿಂದ, ಎಲ್ಲಾ ಅಗತ್ಯ ಪೋಷಕಾಂಶಗಳು ಮತ್ತು ಪಾಲಕ, ಎಲೆಕೋಸು ಮತ್ತು ಮೀನುಗಳಂತಹ ಕಬ್ಬಿಣದ ಸಮೃದ್ಧ ಆಹಾರಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಲು ಪ್ರಾರಂಭಿಸಿ.
ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ. ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ. ಸಾಕಷ್ಟು ನೀರು ಕುಡಿಯಿರಿ.
ರಕ್ತದಾನದ ದಿನ ಮಾಡಬೇಕಾದ ಕೆಲಸ:
ರಕ್ತದಾನ ಮಾಡುವ ದಿನ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಅದ್ರಲ್ಲಿ ನಿಮ್ಮ ಗುರುತಿನ ಐಡಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯಿರಲಿ.
ರಕ್ತದಾನ ಮಾಡುವ ದಿನ ಉಪವಾಸ ಇರಬೇಡಿ. ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ.
ಹಿತವೆನಿಸುವ ಬಟ್ಟೆಯನ್ನು ಧರಿಸಿ. ಉದ್ದ ತೋಳಿನ ಬಟ್ಟೆ ಧರಿಸಬೇಡಿ.
ಮನಸ್ಸು ಶಾಂತವಾಗಿರಲಿ. ಯಾವುದೇ ಒತ್ತಡ, ಟೆನ್ಷನ್ ಗೆ ಒಳಗಾಗದಂತೆ ನೋಡಿಕೊಳ್ಳಿ.
ರಕ್ತದಾನದ ದಿನ ಯಾವುದೇ ಕಾರಣಕ್ಕೂ ಅನಾರೋಗ್ಯಕರ ಆಹಾರ ಸೇವನೆ ಮಾಡಬೇಡಿ. ಔಷಧಿ, ಮದ್ಯಪಾನ ಮಾಡಬೇಡಿ.
ರಕ್ತದಾನದ ನಂತ್ರ ಅವಶ್ಯಕವಾಗಿ ಮಾಡಿ ಈ ಕೆಲಸ :
ರಕ್ತದಾನದ ನಂತ್ರ ಯಾವುದೇ ಕಾರಣಕ್ಕೂ ಹೆಚ್ಚು ಕೆಲಸ ಮಾಡಲು ಹೋಗಬೇಡಿ. ರಕ್ತದಾನದ ನಂತ್ರ ವಿಶ್ರಾಂತಿ ತೆಗೆದುಕೊಳ್ಳಿ.
ದೇಹಕ್ಕೆ ಶಕ್ತಿ ನೀಡಲು ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ.
ದೇಹವು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಕಠಿಣ ಕೆಲಸ, ವ್ಯಾಯಾಮ ಮಾಡಬೇಡಿ.
ಕೆಲವರಿಗೆ ತಲೆ ಸುತ್ತು ಕಾಣಿಸಿಕೊಳ್ಳುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಿ. ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.
ರಕ್ತದಾನ ಮಾಡಿದ ತೋಳಿನ ಬಗ್ಗೆ ಎಚ್ಚರವಿರಲಿ. ಬ್ಯಾಂಡೇಜ್ ಮೇಲೆ ಒತ್ತಡ ಹೇರುವುದನ್ನು ತಪ್ಪಿಸಿ.