alex Certify ಹೀಗೆ ಕಾಂಡೋಮ್​ ಬಳಸಿ ಒಲಿಂಪಿಕ್​​ ಪದಕ ಗೆದ್ದ ಮಹಿಳಾ ಕ್ರೀಡಾಪಟು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಕಾಂಡೋಮ್​ ಬಳಸಿ ಒಲಿಂಪಿಕ್​​ ಪದಕ ಗೆದ್ದ ಮಹಿಳಾ ಕ್ರೀಡಾಪಟು…..!

ವಿಶ್ವದಲ್ಲಿ ಸದ್ಯ ಟೋಕಿಯೋ ಒಲಿಂಪಿಕ್ಸ್​ನದ್ದೇ ಸದ್ದು ಎಂಬಂತಾಗಿದೆ. ಜಪಾನ್​ ರಾಜಧಾನಿಯಲ್ಲಿ ನಡೆಯುತ್ತಿರುವ ಈ ಐತಿಹಾಸಿ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಕ್ರೀಡಾಪಟುಗಳು ಇನ್ನಿಲ್ಲದ ಸಾಹಸವನ್ನು ಪ್ರದರ್ಶಿಸುತ್ತಿದ್ದಾರೆ.

ಈ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಟೋಕಿಯೋ ಒಲಿಂಪಿಕ್​ ಸಂಬಂಧಿ ವಿಡಿಯೋವೊಂದರಲ್ಲಿ  ಮಹಿಳಾ ಕ್ರೀಡಾಪಟು ಮಾಡಿದ ವಿಚಿತ್ರ ಕೆಲಸವೊಂದು ಭಾರೀ ಸುದ್ದಿ ಮಾಡ್ತಿದೆ. ಆಸ್ಟ್ರೇಲಿಯಾದ ಕ್ರೀಡಾಪಟು ಜೆಸ್ಸಿಕಾ ಫಾಕ್ಸ್​  ಕಯಾಕ್​ (ತೊಗಲ ದೋಣಿ) ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. 27 ವರ್ಷದ ಜೆಸ್ಸಿಕಾ ತಾವು ಕಾಂಡೋಮ್​ ಬಳಕೆ ಮಾಡಿ ಈ ಸ್ಪರ್ಧೆ ಗೆದ್ದಿರೋದಾಗಿ ಹೇಳಿಕೊಂಡಿದ್ದಾರೆ.

ಜೆಸ್ಸಿಕಾ ಫಾಕ್ಸ್​  ತಾವು ಯಾವ ರೀತಿಯಲ್ಲಿ ಕಾಂಡೋಮ್​ ಬಳಕೆ ಮಾಡಿದ್ದೆ ಅನ್ನೋದನ್ನ ವಿವರಿಸಿದ್ದಾರೆ. ಜೆಸ್ಸಿಕಾ ಸ್ಪರ್ಧೆಗೆ ಇಳಿಯುವ ಮುನ್ನ ತಮ್ಮ ದೋಣಿಯಲ್ಲಿ ಬಿರುಕು ಉಂಟಾಗಿದ್ದನ್ನ ಗಮನಿಸಿದ್ದರು. ಇದನ್ನು ಅವರು ಒಲಿಂಪಿಕ್ಸ್​​ ಪಂದ್ಯಾವಳಿಯಲ್ಲಿ ಆಟಗಾರರಿಗೆ ನೀಡಲಾಗುವ ಕಾಂಡೋಮ್​ನ್ನು ಬಳಸಿ ಸರಿ ಮಾಡಿಕೊಂಡಿದ್ದಾಗಿ ಟಿಕ್​ ಟಾಕ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ಸ್ಪರ್ಧೆಯಲ್ಲಿ ಚಿನ್ನ ಕಳೆದುಕೊಂಡಿದ್ದಕ್ಕೆ ಜೆಸ್ಸಿಕಾ ಬೇಸರ ವ್ಯಕ್ತಪಡಿಸಿದ್ದರೂ ಸಹ ಕಾಂಡೋಮ್​ನ ನೆರವಿನಿಂದಲೇ ತಾವು ಕಂಚಿನ ಪದಕವನ್ನಾದರೂ ಗೆಲ್ಲುವಂತಾಯ್ತು ಎಂದು ತೃಪ್ತಿ ಪಟ್ಟಿದ್ದಾರೆ. 2016ರ ರಿಯೋ ಡಿ ಜನೈರೋ ಒಲಿಂಪಿಕ್ಸ್​ನಲ್ಲಿ ಜೆಸ್ಸಿಕಾ ಬೆಳ್ಳಿ ಪದಕ ಸಂಪಾದಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...