ಕ್ರಿಕೆಟಿಗ ಕೆ.ಎಲ್ ರಾಹುಲ್ ಸರ್ಜರಿ ಉದ್ದೇಶಕ್ಕಾಗಿ ಜರ್ಮನಿಗೆ ಪ್ರಯಾಣ ಬೆಳೆಸಿದ್ದು, ಅವರೊಂದಿಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ತೆರಳಿದ್ದಾರೆ.
ಮುಂಬೈನ ವಿಮಾನ ನಿಲ್ದಾಣದಲ್ಲಿ ಜರ್ಮನಿಗೆ ತೆರಳುವ ಮುನ್ನ ಅವರಿಬ್ಬರೂ ಕ್ಯಾಮರಾಗೆ ಸೆರೆಯಾಗಿದ್ದಾರೆ. ಅವರ ಪ್ರಯಾಣ ಪೂರ್ವ ಫೋಟೋಗಳು ವೈರಲ್ ಆಗಿವೆ.
ರಾಹುಲ್ ಹಾಗೂ ಅತಿಯಾ ಇಬ್ಬರು ಸ್ನೇಹಿತರಾಗಿದ್ದು, ಶೀಘ್ರವೇ ವಿವಾಹವಾಗಲಿದ್ದಾರೆ. ಮುಂಬರುವ ಬೇಸಿಗೆಯಲ್ಲಿ ಅವರು ಸಪ್ತಪದಿ ತುಳಿಯಲಿದ್ದಾರೆಂಬ ಮಾಹಿತಿ ಇದೆ.
ತೊಡೆ ಸಂದು ನೋವಿನ ಕಾರಣದಿಂದ ಶಸ್ತ್ರ ಚಿಕಿತ್ಸೆಗಾಗಿ ರಾಹುಲ್ ಜರ್ಮನಿಗೆ ತೆರಳಿದ್ದು, ಬಿಸಿಸಿಐ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ನೋವಿನ ಕಾರಣದಿಂದ ರಾಹುಲ್ ಭಾರತ ತಂಡದಿಂದ ತಾತ್ಕಾಲಿಕವಾಗಿ ಹೊರಗುಳಿಯುವಂತಾಗಿದೆ.