ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪೆನಿ ಅಥರ್ ಎನರ್ಜಿ ತನ್ನ ಗ್ರಾಹಕರಿಗಾಗಿ ನೂರು ಶೇಕಡಾ ಆನ್ ರೋಡ್ ಫೈನಾನ್ಸಿಂಗ್ ಯೋಜನೆಯನ್ನು ಪರಿಚಯಿಸಿದೆ. ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಕಂಪೆನಿಯು ಈ ಹೊಸ ಯೋಜನೆಯನ್ನು ಘೋಷಣೆ ಮಾಡಿದೆ.
ನೂರು ಶೇಕಡಾ ಆನ್-ರೋಡ್ ಫೈನಾನ್ಸಿಂಗ್‌ಗೆ ಅನುಕೂಲವಾಗುವುದಕ್ಕಾಗಿ ಅಥರ್ ಎನರ್ಜಿಯು ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಲಿಮಿಟೆಡ್, ಆಕ್ಸಿಸ್ ಬ್ಯಾಂಕ್, ಹೀರೋ ಫಿನ್‌ಕಾರ್ಪ್ ಮತ್ತು ಚೋಳಮಂಡಲಂ ಫೈನಾನ್ಸ್‌ನಂತಹ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.
ಈ ಬಗ್ಗೆ ಅಥರ್ ಎನರ್ಜಿಯ ಮುಖ್ಯ ವ್ಯವಹಾರ ಅಧಿಕಾರಿ ರವನೀತ್ ಫೋಕೆಲಾ ಪ್ರತಿಕ್ರಿಯೆ ನೀಡಿದ್ದು ನಾವು 100% ವರೆಗೆ ಆನ್ ರೋಡ್ ಫೈನಾನ್ಸ್ ನೀಡುವ ಮೂಲಕ ಆಸಕ್ತರಿಗೆ ಎಲೆಕ್ಟ್ರಿಕ್ ವೆಹಿಕಲ್‌ಗಳು ಸುಲಭವಾಗಿ ಕೈಗೆಟುಕುವಂತೆ ಮಾಡುವಲ್ಲಿ ನಮ್ಮ ಕಂಪೆನಿ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ. ಅಥೆರ್ ಎನರ್ಜಿ ಸಂಸ್ಥೆಯ ಪ್ರಕಾರ ಈ ರೀತಿ ಫೈನಾನ್ಸ್ ಮೂಲಕ ವಾಹನ ಖರೀದಿಸುವ ಗ್ರಾಹಕರು ಹೆಚ್ಚಾಗಿದ್ದಾರೆ ಎಂದು ಹೇಳಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ 60 ತಿಂಗಳ ಸಾಲದ ಯೋಜನೆಯನ್ನು ಪರಿಚಯಿಸುವಲ್ಲಿ ಕಂಪನಿಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ EMI ಅನ್ನು 2,999 ರೂ.ಗಳಿಗೆ ನಿಗದಿ ಮಾಡುವ ಮೂಲಕ ಅಥರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಹೆಚ್ಚಿನ ಗ್ರಾಹಕರು ಸುಲಭವಾಗಿ ಖರೀದಿಸುವಂತೆ ಮಾಡಿದೆ. ಅಥರ್ ಎನರ್ಜಿ ಸಂಸ್ಥೆಯು ಇತ್ತೀಚೆಗೆ ಅಥರ್ 450S ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಗಳನ್ನು ಘೋಷಿಸಿದೆ. ಈ ಹೊಸ ಮಾದರಿಯ ಎಲೆಕ್ಟಿಕ್ ಸ್ಕೂಟರ್ ಬೆಲೆ 1.30 ಲಕ್ಷ (ಎಕ್ಸ್ ಶೋ ರೂಂ) ಎಂದು ಕಂಪೆನಿ ಹೇಳಿದೆ. ಈಗಾಗಲೇ ಇದರ ಪ್ರಿ-ಬುಕಿಂಗ್ ಅನ್ನು ಸಹ ಪ್ರಾರಂಭಿಸಲಾಗಿದೆ.
ಈ ಬೆಲೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಟಕ್ಕಾಗಿ ಅಥರ್ ತನ್ನ ದ್ವಿಚಕ್ರ ವಾಹನದ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ ಒಂದು ಸರಳವಾದ LCD ಡಿಸ್ಪ್ಲೆ ಬಳಕೆ ಮಾಡಲಾಗಿದೆ. ಇದರಲ್ಲಿ ಟಚ್ ಇಂಟರ್ಫೇಸ್ ಮತ್ತು ನ್ಯಾವಿಗೇಷನ್ ಸೇರಿದಂತೆ ಇತರ ಆಯ್ಕೆ ಇರೋದಿಲ್ಲ. ಇದನ್ನು ಹೊರತುಪಡಿಸಿ ಅಥರ್ 450S ನ ಚಿಕ್ಕದಾದ 3kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಒಮ್ಮೆ ಇದನ್ನು ಚಾರ್ಜ್ ಮಾಡಿದ್ರೆ 115 ಕಿಲೋಮೀಟರ್ ವರೆಗೆ ಬಳಸಬಹುದು ಎಂದು ಕಂಪನಿ ಹೇಳಿದ್ದು ಗಂಟೆಗೆ ಗರಿಷ್ಟ 90 ಕಿಮೀ ವರೆಗೆ ವೇಗವಾಗಿ ಓಡಿಸಬಹುದು ಎಂದಿದೆ.