ಹಿರೋ ಮೋಟೋ ಕ್ರಾಪ್ ಬೆಂಬಲಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಎಥರ್ ಎನರ್ಜಿ, ತಮಿಳುನಾಡಿನಲ್ಲಿ ತನ್ನ ಎರಡನೇ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. ಕಂಪನಿಯ ಪ್ರಕಾರ, ಈ ಘಟಕ 2022 ರಲ್ಲಿ ಪ್ರಾರಂಭವಾಗಲಿದೆ.
ಹೊಸ ಉತ್ಪಾದನಾ ಘಟಕ ಶುರುವಾದ್ಮೇಲೆ ಕಂಪನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ 1.20 ಲಕ್ಷ ಯುನಿಟ್‌ಗಳಿಂದ ನಾಲ್ಕು ಲಕ್ಷ ಯೂನಿಟ್‌ಗಳಿಗೆ ಹೆಚ್ಚಿಸಲು ಸಾಧ್ಯವಾಗಲಿದೆ.
ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಾಗ್ತಿದ್ದಂತೆ ಜನರು ಎಲೆಕ್ಟ್ರಿಕ್ ವಾಹನ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಇದಕ್ಕೆ ತಕ್ಕಂತೆ ಕಂಪನಿಗಳು ಉತ್ಪಾದನೆ ಮಾಡಬೇಕಿದೆ. ಹಾಗಾಗಿ ತಮಿಳುನಾಡಿನ ಹೊಸೂರಿನಲ್ಲಿ ಹೊಸ ಘಟಕವನ್ನು ಸ್ಥಾಪಿಸಲಾಗುವುದು ಎಂದು ಎಥರ್ ಎನರ್ಜಿ ಹೇಳಿದೆ.
ಬೆಂಗಳೂರು ಮೂಲದ ಎಥರ್ ಎನರ್ಜಿ ಈ ವರ್ಷದ ಆರಂಭದಲ್ಲಿ ಹೊಸೂರಿನಲ್ಲಿ ತನ್ನ ಮೊದಲ ಉತ್ಪಾದನಾ ಘಟಕವನ್ನು ಸ್ಥಾಪಿಸಿತ್ತು. ಹೊಸ ಸ್ಥಾವರವು ಕಂಪನಿಯ ಪ್ರಮುಖ ಕ್ಷೇತ್ರವಾದ ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲೆ ಕೇಂದ್ರೀಕರಿಸುತ್ತದೆ.
ಕಂಪನಿಯ ಪ್ರಕಾರ, ಈ ಹೊಸ ಸ್ಥಾವರವು ತನ್ನ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ 1,20,000 ಯುನಿಟ್‌ಗಳಿಂದ ವಾರ್ಷಿಕ ನಾಲ್ಕು ಲಕ್ಷ ಯೂನಿಟ್‌ಗಳಿಗೆ ಹೆಚ್ಚಿಸಲು ಸಹಾಯ ಮಾಡಲಿದೆ.