alex Certify ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿ ಸಂಘ ಸ್ಥಾಪಿಸಿ, ವಾಟ್ಸಾಪ್ ಗ್ರೂಪ್ ರಚಿಸುವಂತೆ ‘ಶಿಕ್ಷಣ ಇಲಾಖೆ’ ಸೂಚನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿ ಸಂಘ ಸ್ಥಾಪಿಸಿ, ವಾಟ್ಸಾಪ್ ಗ್ರೂಪ್ ರಚಿಸುವಂತೆ ‘ಶಿಕ್ಷಣ ಇಲಾಖೆ’ ಸೂಚನೆ..!

ಬೆಂಗಳೂರು : ಸರ್ಕಾರದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ವಾರದೊಳಗೆ ಕಡ್ಡಾಯವಾಗಿ ಹಳೇ ವಿದ್ಯಾರ್ಥಿ ಸಂಘ ಸ್ಥಾಪಿಸಿ ವಾಟ್ಸಾಪ್ ಗ್ರೂಪ್ ರಚಿಸಿ ಕಚೇರಿಯಿಂದ ನೀಡಿರುವ ಗೂಗಲ್ ಫಾರ್ಮ್ನಲ್ಲಿ ಮಾಹಿತಿ ಭರ್ತಿ ಮಾಡಬೇಕೆಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಹಿಂದೆಯೇ ಹೊರಡಿಸಿದ್ದ ಆದೇಶನ್ವಯ 25,007 ಶಾಲೆಗಳ ಪೈಕಿ 15,170 ಶಾಲೆಗಳು ವಾಟ್ಸಾಪ್ ಗ್ರೂಪ್ ರಚಿಸಿಕೊಂಡಿವೆ. ಈಗಾಗಲೇ ಹಳೇ ವಿದ್ಯಾರ್ಥಿಗಳ ಸಂಘ ರಚಿಸಿಕೊಂಡಿರುವ ಶಾಲೆಗಳು ವಾಟ್ಸಾಪ್ ಗ್ರೂಪ್ ಆರಂಭಿಸಿ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು. ಸಂಘ ಸ್ಥಾಪಿಸದ ಶಾಲೆಗಳು ಮುಂದಿನ ಒಂದು ವಾರದೊಳಗೆ ಕಡ್ಡಾಯವಾಗಿ ಸ್ಥಾಪಿಸಿಕೊಂಡು ವಾಟ್ಸಾಪ್ ಗ್ರೂಪ್ ರಚಿಸಿಕೊಳ್ಳಬೇಕೆಂದು ಇಲಾಖೆ ಗಡುವು ನೀಡಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳು 30/05/2024 ರಿಂದ ಒಂದುವಾರದೊಳಗೆ ಕಡ್ಡಾಯವಾಗಿ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಿ ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡು ಕಛೇರಿಯಿಂದ ನೀಡಿರುವ ಗೂಗಲ್ ಪಾರ್ಮ್ನಲ್ಲಿ ಮಾಹಿತಿಯನ್ನು ಭರ್ತಿ ಮಾಡುವುದು. ಎಲ್ಲಾ ಶಾಲೆಗಳು ಸಂಘ ಸ್ಥಾಪಿಸುವಂತೆ ಹಾಗೂ ವಾಟ್ಸ್ ಆಪ್ ಗ್ರೂಪ್ ರಚಿಸಿಕೊಳ್ಳುವಂತೆ ಉಪನಿರ್ದೇಶಕರು (ಆಡಳಿತ) ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...