ಲಖ್ನೋ: ಉತ್ತರ ಪ್ರದೇಶದ ಸುಲ್ತಾನ್ ಪುರದಲ್ಲಿ ತರಬೇತಿ ವೇಳೆ ಹೆಡ್ ಕಾನ್ ಸ್ಟೆಬಲ್ ಒಬ್ಬರು ಮಲಗಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಅವರಿಗೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದರು. ಪೊಲೀಸ್ ಸ್ಪಷ್ಟೀಕರಣ ಪತ್ರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾನ್ಸ್ಟೆಬಲ್ ರಾಮ್ ಶರೀಫ್ ಯಾದವ್ ಸೋಮವಾರ ತಮ್ಮ ತರಬೇತಿ ಅವಧಿಯಲ್ಲಿ ಮಲಗಿದ್ದರು. ಅವರ ಕಮಾಂಡರ್ ಇದು ಸಂಪೂರ್ಣ ನಿರ್ಲಕ್ಷ್ಯದ ಸಂಕೇತ ಎಂದು ಹೇಳಿ ಸ್ಪಷ್ಟೀಕರಣ ಕೋರಿದ್ದಾರೆ.
ಸ್ಪಷ್ಠೀಕರಣ ಪತ್ರ ಬರೆದ ರಾಮ್ ಶರೀಫ್, ನಾನು ಲಕ್ನೋದಿಂದ ಪಿಟಿಸಿ ದದುಪುರಕ್ಕೆ ತರಬೇತಿಗಾಗಿ ಬಂದಿದ್ದು, ಇಲ್ಲಿಗೆ ಬರುವಾಗ ತುಂಬಾ ತೊಂದರೆ ಅನುಭವಿಸಿದೆ, ಸರಿಯಾಗಿ ಆಹಾರ ಸಿಗದ ಕಾರಣ ನನ್ನ ಹೊಟ್ಟೆ ತುಂಬಲಿಲ್ಲ, ಆದ್ದರಿಂದ ಮರುದಿನ ಬೆಳಿಗ್ಗೆ ನಾನು ಊಟ ಮಾಡಿದೆ. 25 ರೊಟ್ಟಿಗಳು, ಒಂದು ತಟ್ಟೆ ಅನ್ನ, ಎರಡು ಬಟ್ಟಲು ದಾಲ್ ಮತ್ತು ಒಂದು ಬಟ್ಟಲು ತರಕಾರಿಗಳು ಸೇವಿಸಿದ್ದರಿಂದ ನನಗೆ ಆಲಸ್ಯವಾಗಿ ನಿದ್ದೆ ಬರುವಂತೆ ಮಾಡಿತು ಎಂದು ತಿಳಿಸಿದ್ದಾರೆ.
ತಪ್ಪಿಗಾಗಿ ಅವರು ಕ್ಷಮೆಯಾಚಿಸಿ ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಹಿರಿಯ ಅಧಿಕಾರಿಗೆ ತಿಳಿಸಿದ್ದಾರೆ. ಈ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ, ವಿರೋಧ ಚರ್ಚೆಗೆ ಕಾರಣವಾಗಿದೆ.