ಬೆಂಗಳೂರು: ರಾಜ್ಯದ ರೈತರ ಮನೆ ಬಾಗಿಲಿಗೆ ಉಚಿತವಾಗಿ ಕಂದಾಯ ದಾಖಲೆ ವಿತರಿಸುವ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ.
ಮನೆಬಾಗಿಲಿಗೆ ದಾಖಲೆಗಳನ್ನು ನೀಡಲಾಗಿದ್ದು, ದಾಖಲೆ ಸಿಗದವರಿಗೆ ಆಟಲ್ ಜೀ ಜನಸ್ನೆಹಿ ಕೇಂದ್ರದಲ್ಲಿ ಮಾರ್ಚ್ 21 ರಿಂದ 27 ರವರೆಗೆ ಉಚಿತವಾಗಿ ವಿತರಿಸಲಾಗುತ್ತದೆ. ಇಲಾಖೆ ವತಿಯಿಂದ ಸುತ್ತೋಲೆ ಹೊರಡಿಸಿದ್ದು, ರೈತರಿಗೆ ಕಂದಾಯ ದಾಖಲೆಗಳನ್ನು ಉಚಿತವಾಗಿ ತಲುಪಿಸಬೇಕು. ಆಧಾರ್ ಕಾರ್ಡ್ ಬಳಸಿ ಗುರುತಿಸಬೇಕು, ಇಲ್ಲದಿದ್ದರೆ ಪಡಿತರ ಚೀಟಿ ಬಳಸಿ ಗುರುತಿಸಬೇಕು. ಮೊಬೈಲ್ ಸಂಖ್ಯೆ ಲಭ್ಯವಿದ್ದರೆ ಪಡೆದುಕೊಳ್ಳಬೇಕು ಎಂದು ಕಂದಾಯ ಇಲಾಖೆ ಉಪಕಾರ್ಯದರ್ಶಿ ಡಾ.ಎಂ.ಎನ್. ರಾಜೇಂದ್ರ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.
ರೈತರ ಮನೆ ಬಾಗಿಲಿಗೆ ಪಹಣಿ, ಅಟ್ಲಾಸ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. 50 ಲಕ್ಷ ರೈತ ಕುಟುಂಬಗಳಿಗೆ 4 ಕೋಟಿ ದಾಖಲೆಗಳನ್ನು ವಿತರಿಸಲಾಗಿದ್ದು, ದಾಖಲೆ ಸಿಗದವರು ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಮಾ. 21 ರಿಂದ 27 ರವರೆಗೆ ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.