ನಿಮ್ಮ ನಿವೃತ್ತಿ ಜೀವನವನ್ನು ಆರ್ಥಿಕವಾಗಿ ಸುಭದ್ರವಾಗಿಸಲು ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ ಸರ್ಕಾರದ ಅಟಲ್ ಪಿಂಚಣಿ ಯೋಜನೆ ಒಂದು ಒಳ್ಳೆಯ ಆಯ್ಕೆ.
ಈ ಯೋಜನೆಯಲ್ಲಿ ಪತಿ ಹಾಗೂ ಪತ್ನಿಯರಿಬ್ಬರೂ ಪ್ರತ್ಯೇಕ ಖಾತೆಗಳನ್ನು ತೆರೆದು, ಪ್ರತಿ ತಿಂಗಳು 10,000 ರೂ. ಪಿಂಚಣಿ ಪಡೆಯಬಹುದಾಗಿದೆ.
2015ರಲ್ಲಿ ಆರಂಭಗೊಂಡ ಅಟಲ್ ಪಿಂಚಣಿ ಯೋಜನೆ ಆರಂಭದ ದಿನಗಳಲ್ಲಿ ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಆರಂಭಿಸಲಾಗಿತ್ತು. ಆದರೆ ಈಗ 18-40ರ ವಯೋಮಾನದಲ್ಲಿರುವ ಭಾರತೀಯ ಪ್ರಜೆಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದಾಗಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಇರುವ ಮಂದಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. 60 ವರ್ಷಗಳ ಬಳಿಕ ಹೂಡಿಕೆದಾರರಿಗೆ ಈ ಯೋಜನೆಯಲ್ಲಿ ಪಿಂಚಣಿ ಸಿಗಲಿದೆ.
ಕಪಾಳಮೋಕ್ಷ ಮಾಡಿದ ಪತಿಗೆ ತಿರುಗಿಸಿಬಿಟ್ಲು ಪತ್ನಿ…! ಟಿವಿ ಧಾರಾವಾಹಿ ದೃಶ್ಯದ ಕುರಿತು ನಡೆದಿದೆ ಹೀಗೊಂದು ಚರ್ಚೆ
ನಿಮ್ಮಲ್ಲಿ ಉಳಿತಾಯ ಖಾತೆ, ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಇದ್ದರೆ ಮೇಲ್ಕಂಡ ಯೋಜನೆಯಲ್ಲಿ ಹೂಡಿಕೆ ಆರಂಭಿಸಬಹುದಾಗಿದೆ. 18 ವರ್ಷ ವಯೋಮಾನದ ಮಂದಿಗೆ ಈ ಯೋಜನೆ ಬಹಳ ಉಪಯುಕ್ತವಾಗಿದ್ದು, ಪ್ರತಿ ತಿಂಗಳು 210 ರೂಪಾಯಿಗಳ ಹೂಡಿಕೆ ಮಾಡುತ್ತಾ ಸಾಗಿದರೆ 60 ವರ್ಷದ ಬಳಿಕ ಪಿಂಚಣಿಗೆ ಅರ್ಹರಾಗಬಹುದಾಗಿದೆ.
39 ವರ್ಷ ವಯಸ್ಸಿನೊಳಗಿರುವ ಪತಿ ಹಾಗೂ ಪತ್ನಿಯರು ಈ ಯೋಜನೆಯ ಲಾಭ ಪಡೆದು 60 ವರ್ಷಗಳ ಬಳಿಕ ಪಿಂಚಣಿ ಪಡೆಯಬಹುದಾಗಿದೆ. ಪತಿ ಹಾಗೂ ಪತ್ನಿ ಇಬ್ಬರಿಗೂ 30 ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದರೆ, ಮಾಸಿಕ 577 ರೂಪಾಯಿಗಳ ಹೂಡಿಕೆಯಿಂದ ತಮ್ಮ ಎಪಿವೈ ಖಾತೆ ಆರಂಭಿಸಬಹುದಾಗಿದೆ. ಖಾತ್ರಿಯಾದ ಪಿಂಚಣಿಯೊಂದಿಗೆ ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಮೃತಪಟ್ಟಲ್ಲಿ ಬದುಕುಳಿದ ಸಂಗಾತಿಗೆ 8.5 ಲಕ್ಷ ರೂ. ನಗದು ಹಾಗೂ ಮಾಸಿಕ ಪಿಂಚಣಿ ಸಿಗಲಿದೆ.
ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮಂದಿಗೆ ಆದಾಯ ತೆರಿಗೆ ಕಾಯಿದೆ 80ಸಿ ಅಡಿ ತೆರಿಗೆ ಲಾಭವೂ ಸಿಗಲಿದೆ. ರಾಷ್ಟ್ರೀಯ ಪಿಂಚಣಿ ಸೇವೆಯ 4.2 ಕೋಟಿ ಚಂದಾದಾರರ ಪೈಕಿ 28 ಲಕ್ಷ ಮಂದಿ 2020-21ರ ವಿತ್ತೀಯ ವರ್ಷದ ಅಂತ್ಯದ ವೇಳೆಗೆ ಎಪಿವೈ ಯೋಜನೆ ಆಯ್ದುಕೊಂಡಿದ್ದಾರೆ. ಎನ್‌ಪಿಎಸ್ ಚಂದಾದಾರರ ಪೈಕಿ 3.77 ಕೋಟಿ ಮಂದಿ (89%) ಮಹಾನಗರಗಳ ಹೊರಗಿನವರೇ ಆಗಿದ್ದಾರೆ.