ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗಿ, ಇಳಿವಯಸ್ಸಿನಲ್ಲಿ ಪಿಂಚಣಿ ಸೌಲಭ್ಯ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಆರು ವರ್ಷಗಳ ಮುನ್ನವೇ ಅಟಲ್ ಪೆನ್ಷನ್ ಯೋಜನೆ (ಎಪಿವೈ) ಜಾರಿಗೆ ತಂದಿದೆ.
ಸದ್ಯದ ಮಟ್ಟಿಗೆ ಮೂರು ಕೋಟಿಗೂ ಅಧಿಕ ಜನರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ. ಮಾಸಿಕ ಕನಿಷ್ಟ 1000 ರೂ.ಗಳಿಂದ ಗರಿಷ್ಠ 5000 ರೂ.ವರೆಗೆ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಎಪಿವೈ ಯೋಜನೆಯಲ್ಲು ಹೂಡಿಕೆ ಮಾಡುವವರಿಗೆ 18 ವರ್ಷ ದಾಟಿದ್ದರೆ ಸಾಕು. ಆಧಾರ್ ಕಾರ್ಡ್ ದಾಖಲೆ ನೀಡಿ ಅಂಚೆ ಕಚೇರಿ, ಬ್ಯಾಂಕ್ಗಳಲ್ಲಿ ಖಾತೆ ತೆರೆಯಬಹುದು. ಖಾತೆದಾರರು 60 ವರ್ಷ ತುಂಬುವವರೆಗೆ ಮಾಸಿಕ 210 ರೂ. (ದಿನಕ್ಕೆ 7 ರೂ.) ಅಥವಾ ವಾರ್ಷಿಕ 2520 ರೂ. ತುಂಬಿದರೆ ಸಾಕು. ಬಳಿಕ ಖಾತೆದಾರರಿಗೆ 60 ವರ್ಷ ತುಂಬಿದ ಮೇಲೆ ಸರ್ಕಾರದಿಂದ ಮಾಸಿಕ 5000 ರೂ. ಮಾಸಿಕ ಪಿಂಚಣಿ ನೀಡಲಾಗುವುದು.
ಮತ್ತೊಂದು ವಿಚಿತ್ರ ವಿಷ್ಯಕ್ಕೆ ಚರ್ಚೆಯಾಗ್ತಿದ್ದಾರೆ ಸೆಕ್ಸ್ ಡಾಲ್ ಜೊತೆ ಮದುವೆಯಾಗಿದ್ದ ಬಾಡಿ ಬಿಲ್ಡರ್
ಆನ್ಲೈನ್ ಮೂಲಕ ಅಟಲ್ ಪಿಂಚಣಿ ಅಡಿಯಲ್ಲಿ ಖಾತೆ ತೆರೆದು ಹೂಡಿಕೆ ಮಾಡಲು https://enps.nsdl.com/eNPS/NationalPensionSystem.html ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ. ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯು ಬಳಕೆಯಲ್ಲಿದ್ದರೆ ಒಟಿಪಿ ಪಡೆಯಲು ಸುಲಭವಾಗುತ್ತದೆ.