alex Certify ʼನಿರುದ್ಯೋಗʼ ಭತ್ಯೆ ಪಡೆಯುವುದು ಹೇಗೆ ಗೊತ್ತಾ…..? ಇಲ್ಲಿದೆ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಿರುದ್ಯೋಗʼ ಭತ್ಯೆ ಪಡೆಯುವುದು ಹೇಗೆ ಗೊತ್ತಾ…..? ಇಲ್ಲಿದೆ ಒಂದಷ್ಟು ಮಾಹಿತಿ

ನಿರುದ್ಯೋಗಿಗಳಿಗೆ ಆರ್ಥಿಕ ನೆರವು ನೀಡಲು, ಸರ್ಕಾರ, ನಿರುದ್ಯೋಗಿ ಭತ್ಯೆ ನೀಡುತ್ತದೆ. ಕೆಲಸ ಕಳೆದುಕೊಂಡವರಿಗೆ ಇದ್ರಿಂದ ಸ್ವಲ್ಪ ನೆಮ್ಮದಿ ಸಿಗಲಿದೆ. ನಿರುದ್ಯೋಗಿಗಳ ನೆರವಿದಾಗಿ ಸರ್ಕಾರ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ  ನಡೆಸುತ್ತಿದೆ.

ಈವರೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಇದ್ರ ಲಾಭ ಪಡೆದಿದ್ದಾರೆ. ನೌಕರರ ರಾಜ್ಯ ವಿಮಾ ನಿಗಮ ಈ ಯೋಜನೆ ಜವಾಬ್ದಾರಿ ಹೊತ್ತಿದೆ. ಕೊರೊನಾ ಗಮನದಲ್ಲಿಟ್ಟುಕೊಂಡು ಅಟಲ್ ಬಿಮಿಟ್ ವ್ಯಕ್ತಿ ಕಲ್ಯಾಣ ಯೋಜನೆಯನ್ನು ಜೂನ್ 30, 2022 ರವರೆಗೆ ವಿಸ್ತರಿಸಲಾಗಿದೆ.

ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆಯಡಿಯಲ್ಲಿ, ಕೆಲಸ ಕಳೆದುಕೊಂಡಾಗ, ವ್ಯಕ್ತಿಯ ಜೀವನೋಪಾಯಕ್ಕಾಗಿ ಭತ್ಯೆಯನ್ನು ನೀಡಲಾಗುತ್ತದೆ. ನಿರುದ್ಯೋಗಿ ವ್ಯಕ್ತಿಯು ಈ ಭತ್ಯೆಯ ಲಾಭವನ್ನು 3 ತಿಂಗಳವರೆಗೆ ಪಡೆಯಬಹುದು. 3 ತಿಂಗಳವರೆಗೆ, ಸರಾಸರಿ ಸಂಬಳದ ಶೇಕಡಾ 50ರಷ್ಟು ಹಣ ಆತನಿಗೆ ಸಿಗುತ್ತದೆ. ಕೆಲಸ ಕಳೆದುಕೊಂಡ 30 ದಿನಗಳ ನಂತ್ರ ಈ ಯೋಜನೆಗೆ ಸೇರಬಹುದು.

ಯೋಜನೆಯ ಲಾಭ ಪಡೆಯಲು, ಇಎಸ್ಐಸಿಗೆ ಸಂಬಂಧಿಸಿದ ಉದ್ಯೋಗಿಗಳು ಇಎಸ್ಐಸಿಯ ಯಾವುದೇ ಶಾಖೆಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇದರ ನಂತ್ರ ಅರ್ಜಿಯನ್ನು ಇಎಸ್ಐಸಿಯಿಂದ ದೃಢೀಕರಿಸಲಾಗುವುದು. ಇದು ಸರಿಯಾಗಿದ್ದಲ್ಲಿ, ನಿರುದ್ಯೋಗಿ ಖಾತೆಗೆ ಹಣ ಬರಲಿದೆ.

ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಕಂಪನಿಯು ಪ್ರತಿ ತಿಂಗಳು ಪಿಎಫ್/ಇಎಸ್ಐ ಗಾಗಿ ಸಂಬಳದಿಂದ ಹಣವನ್ನು ಕಡಿತಗೊಳಿಸುತ್ತದೆ. ಅಂತ ಉದ್ಯೋಗದಲ್ಲಿರುವ ಜನರು, ಕೆಲಸ ಕಳೆದುಕೊಂಡಾಗ ಈ ಯೋಜನೆ ಲಾಭ ಪಡೆಯಬಹುದು. ಖಾಸಗಿ ಕಂಪನಿಗಳು, ಕಾರ್ಖಾನೆಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇಎಸ್‌ಐ ಲಾಭ ಲಭ್ಯವಿದೆ. ಇದಕ್ಕಾಗಿ ಇಎಸ್‌ಐ ಕಾರ್ಡ್ ತಯಾರಿಸಲಾಗುತ್ತದೆ. ಉದ್ಯೋಗಿಗಳು ಈ ಕಾರ್ಡ್ ಅಥವಾ ಕಂಪನಿಯಿಂದ ತಂದ ಡಾಕ್ಯುಮೆಂಟ್ ಆಧಾರದ ಮೇಲೆ ಯೋಜನೆಯ ಲಾಭವನ್ನು ಪಡೆಯಬಹುದು. ಮಾಸಿಕ ಆದಾಯ 21 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ಇಎಸ್‌ಐ ಲಾಭ ಲಭ್ಯವಿದೆ.

3 ತಿಂಗಳ ಕಾಲ ನಿರುದ್ಯೋಗಿಗಳಾಗಿದ್ದರೆ ಮಾತ್ರ ಯೋಜನೆಯ ಲಾಭ ಲಭ್ಯವಾಗುತ್ತದೆ. ಯಾವುದೇ ನಿರುದ್ಯೋಗಿ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆ ಮಾತ್ರ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಕಲ್ಯಾಣ ಯೋಜನೆಯ ಲಾಭ ಪಡೆಯಬಹುದು. ಯೋಜನೆಯ ಲಾಭ ಪಡೆಯಲು, ಅಟಲ್ ಬಿಮಿಟ್ ವ್ಯಕ್ತಿ ಕಲ್ಯಾಣ ಕಲ್ಯಾಣ ಯೋಜನೆಯ ನಮೂನೆಯನ್ನು ಇಎಸ್‌ಐಸಿ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಬೇಕು. https://www.esic.nic.in/attachments/circularfile/93e904d2e3084d65fdf7793e9098d125.pdf ನಲ್ಲಿ ಫಾರ್ಮ್ ಲಭ್ಯವಿದೆ. ಫಾರ್ಮ್ ಭರ್ತಿ ಮಾಡಿದ ನಂತ್ರ ನೌಕರರ ರಾಜ್ಯ ವಿಮಾ ನಿಗಮದ ಹತ್ತಿರದ ಶಾಖೆಗೆ ಸಲ್ಲಿಸಿ. ನಮೂನೆಯ ಜೊತೆ ನಾನ್ ಜ್ಯುಡಿಶಿಯಲ್ ಸ್ಟಾಂಪ್ ಪೇಪರ್  ಮೇಲೆ 20  ರೂಪಾಯಿ ನೋಟರಿಯ ಅಫಿಡವಿಟ್ ಲಗತ್ತಿಸಲಾಗುತ್ತದೆ. ಕ್ರಿಮಿನಲ್ ಕೇಸ್ ದಾಖಲಿಸಿರುವ ಅಥವಾ ಸ್ವಯಂ ನಿವೃತ್ತಿ  ತೆಗೆದುಕೊಂಡ ಉದ್ಯೋಗಿಗಳು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...