ನೀರು ಆರೋಗ್ಯದ ಮೂಲ ಮಂತ್ರ. ಹೆಚ್ಚು ಹೆಚ್ಚು ನೀರು ಕುಡಿದಷ್ಟು ಆರೋಗ್ಯವಂತರಾಗಿರ್ತೇವೆ. ಆಹಾರಕ್ಕಿಂತ ಜಾಸ್ತಿ ನೀರು ಸೇವನೆ ಮಾಡಿ ಅಂತಾ ವೈದ್ಯರು ಕೂಡ ಹೇಳ್ತಾರೆ. ಆದ್ರೆ ಆಚಾರ್ಯ ಚಾಣಕ್ಯ ಎಷ್ಟು ನೀರು ಕುಡಿಯಬೇಕು? ಯಾವಾಗ ಕುಡಿಯಬೇಕು ಎನ್ನುವ ಬಗ್ಗೆ ಏನು ಹೇಳಿದ್ದಾರೆ ಎಂಬುದು ನಿಮಗೆ ಗೊತ್ತಾ?
ಆಹಾರ ಸೇವಿಸುವ ಕೆಲವೇ ಕ್ಷಣದ ಮೊದಲು ನೀರು ಕುಡಿಯಬಾರದು ಎನ್ನುತ್ತಾರೆ ಚಾಣಕ್ಯ. ಆಹಾರ ಸೇವನೆಗಿಂತ ಮೊದಲು ತುಂಬಾ ನೀರು ಕುಡಿದ್ರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ.
ಆಹಾರ ಸೇವಿಸಿದ ತಕ್ಷಣವೂ ನೀರನ್ನು ಕುಡಿಯಬಾರದು. ಇದು ವಿಷಕ್ಕೆ ಸಮಾನ. ಇದರಿಂದ ಆರೋಗ್ಯ ವೃದ್ಧಿಯಾಗುವ ಬದಲು ಅನಾರೋಗ್ಯ ಕಾಡುತ್ತದೆ ಎನ್ನುತ್ತಾರೆ ಚಾಣಕ್ಯ. ಅವಶ್ಯಕತೆ ಇದ್ದಲ್ಲಿ ಆಹಾರದ ಜೊತೆ ಸ್ವಲ್ಪ ಸ್ವಲ್ಪ ನೀರು ಕುಡಿಯಿರಿ ಎನ್ನುತ್ತಾರೆ ಚಾಣಕ್ಯ.
ದೈಹಿಕ ಕೆಲಸ ಮಾಡಿ ದಣಿದು ಬಂದವರು ತಕ್ಷಣ ನೀರು ಕುಡಿಯಬಾರದು. ಸುಮಾರು ಅರ್ಧ ಗಂಟೆಯವರೆಗೆ ನೀರು ಕುಡಿಯದೆ ಇರುವುದು ಒಳ್ಳೆಯದು. ತಕ್ಷಣ ನೀರು ಕುಡಿಯುವುದರಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿರುತ್ತವೆ.
ಕೆಲವರಿಗೆ ಸ್ನಾನದ ನಂತ್ರ ನೀರು ಬೇಕು. ಆದ್ರೆ ಸ್ನಾನವಾದ ತಕ್ಷಣ ನೀರು ಕುಡಿಯುವುದು ಅಪಾಯಕಾರಿ. ಜೀರ್ಣಕ್ರಿಯೆಗೆ ಇದರಿಂದ ಹಾನಿಯಾಗುವ ಸಾಧ್ಯತೆಗಳಿರುತ್ತದೆ. ಜೊತೆಗೆ ಸ್ನಾನ ಮಾಡಿದಾಗ ದೇಹ ತಣ್ಣಗಿರುವುದರಿಂದ ನೀರು ಕುಡಿಯುವುದು ಹಾನಿಕಾರಕವಾಗುತ್ತದೆ.