ಕಿಶನ್‌ಗಢ್: ದಿವ್ಯ ಕ್ಷೇತ್ರ ಕಿಶನ್‌ಗಢ್ ಧಾಮವು ಮಧ್ಯಪ್ರದೇಶದ ತೆಂಡುಖೇಡ ತಹಸಿಲ್‌ನ ಸೈಲ್ವಾರಾದಿಂದ 5 ಕಿಮೀ ದೂರದಲ್ಲಿದೆ. ಇದು ಸಿದ್ಧರ ನೆಲೆ ಎಂದು ಪ್ರಸಿದ್ಧವಾಗಿದೆ. ಸದ್ಗುರು ದೇವ್ ದಾದಾ ಜಿ ಸರ್ಕಾರ್ ಅವರು ಈ ಸಿದ್ಧ ಕ್ಷೇತ್ರ ಕಿಶನ್‌ಗಢ್ ಧಾಮದಲ್ಲಿ ತಪಸ್ಸು ಮಾಡಿದರು ಎನ್ನಲಾಗುತ್ತದೆ.
ಇಲ್ಲಿಯ ಕುತೂಹಲದ ವಿಷಯ ಎಂದರೆ, ಇಲ್ಲಿರುವ ದೈತ್ಯ ಬಂಡೆಗಳಿಂದ ಯಾವಾಗಲೂ ನೀರಿನ ಹರಿವು ಹೊರಬರುತ್ತದೆ. ಕಲ್ಲಿನ ಮಧ್ಯದಲ್ಲಿ ನಿರ್ಮಿಸಿರುವ ಈ ಕುಂಡದಲ್ಲಿ ನೀರು ಎಲ್ಲಿಂದ ಬರುತ್ತದೆ ಎಂದು ಇಲ್ಲಿಯವರೆಗೆ ಯಾರೂ ಪತ್ತೆ ಮಾಡಿಲ್ಲ. ಕಲ್ಲುಗಳಲ್ಲಿ ಯಾವುದೇ ರೀತಿಯ ರಂಧ್ರ ಗೋಚರಿಸುವುದಿಲ್ಲ. ಆದರೂ, ಈ ಕುಂಡದಿಂದ ವರ್ಷಪೂರ್ತಿ ನೀರು ಹರಿಯುತ್ತಲೇ ಇರುತ್ತದೆ ಮತ್ತು ಎಂದಿಗೂ ಮುಗಿಯುವುದಿಲ್ಲ. ಜನರು ಇದನ್ನು ದೈವಿಕ ಶಕ್ತಿ ಅಥವಾ ಸಿದ್ಧರ ತಪಸ್ಸು ಎಂದು ಕರೆಯುತ್ತಾರೆ.
ಕಲ್ಲುಗಳಿಂದ ಹೊರಬರುವ ನೀರು ಮೊದಲು ಹತ್ತಿರದಲ್ಲಿ ನಿರ್ಮಿಸಲಾದ ದೊಡ್ಡ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಪ್ರಾಣಿ-ಪಕ್ಷಿಗಳ ದಾಹ ತೀರಿ ವನ್ಯಪ್ರಾಣಿಗಳೂ ತಣಿಯುತ್ತಿವೆ. ಗ್ರಾಮಸ್ಥರು ಈ ಕುಂಡವನ್ನು ದೇವರ ಪವಾಡ ಎಂದು ಕರೆಯುತ್ತಾರೆ. ಇದು ಸದ್ಗುರು ದೇವ್ ದಾದಾ ಜಿ ಸರ್ಕಾರ್ ಅವರ ತಪಸ್ಸಿನ ಫಲ ಎಂದು ಕೆಲವರು ಹೇಳಿದ್ದಾರೆ. ವರದಿಗಳ ಪ್ರಕಾರ, ಬೇಸಿಗೆಯಲ್ಲಿ ಕುಂಡ್‌ನಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತದೆ. ಬಿಸಿಲಿನ ತಾಪ ಹೆಚ್ಚಾದಂತೆ ಕುಂಡದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ.